ಸಾರಾಂಶ
ಬೆಂಗಳೂರು: ಇಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮುಂಬೈನ 14 ವರ್ಷದ ಇರಾ ಜಾಧವ್ 157 ಎಸೆತಗಳಲ್ಲಿ 346 ರನ್ ಸಿಡಿಸಿದ್ದಾರೆ. ಇದು ಟೂರ್ನಿ ಇತಿಹಾಸದಲ್ಲೇ ಗರಿಷ್ಠ ವೈಯಕ್ತಿಕ ಸ್ಕೋರ್. ಅವರ ಇನ್ನಿಂಗ್ಸ್‌ನಲ್ಲಿ 42 ಬೌಂಡರಿ, 16 ಸಿಕ್ಸರ್‌ಗಳಿದ್ದವು.
ಒಟ್ಟಾರೆ ಅಂಡರ್-19 ಮಹಿಳಾ ಏಕದಿನದಲ್ಲಿ ಇದು 2ನೇ ಗರಿಷ್ಠ. 2010ರಲ್ಲಿ ದ.ಆಫ್ರಿಕಾದ ಲಿಜೆಲ್ಲೆ 427 ರನ್ ಸಿಡಿಸಿದ್ದರು. ಇರಾ ಸಾಹಸದಿಂದಾಗಿ ಮುಂಬೈ 50 ಓವರಲ್ಲಿ 3 ವಿಕೆಟ್‌ಗೆ 563 ರನ್ ಕಲೆಹಾಕಿತು. ಬೃಹತ್ ಗುರಿ ಬೆನ್ನತ್ತಿದ ಮೇಘಾಲಯ 25.4 ಓವರ್‌ಗಳಲ್ಲಿ ಕೇವಲ 19ಕ್ಕೆ ಆಲೌಟಾಗಿ, 544 ರನ್ ಹೀನಾಯ ಸೋಲನುಭವಿಸಿತು.
ಪಂಜಾಬ್‌ಗೆ ಶ್ರೇಯಸ್ ನಾಯಕ: ಬಿಗ್‌ಬಾಸ್ ಶೋನಲ್ಲಿ ಘೋಷಣೆ
ಮುಂಬೈ: ಐಪಿಎಲ್‌ನ ಪಂಜಾಬ್ ಕಿಂಗ್ಸ್ ತಂಡಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ನೇಮಕಗೊಂಡಿದ್ದಾರೆ. ಭಾನುವಾರ ಹಿಂದಿ ಬಿಗ್‌ಬಾಸ್ ಶೋನಲ್ಲಿ ನಿರೂಪಕ ಸಲ್ಮಾನ್ ಖಾನ್ ಅವರು ಶ್ರೇಯಸ್ ಪಂಜಾಬ್‌ನ ನಾಯಕ ಎಂದು ಘೋಷಿಸಿದರು. ಶೋನಲ್ಲಿ ತಂಡ ಇನ್ನಿಬ್ಬರು ಆಟಗಾರರಾದ ಯಜುವೇಂದ್ರ ಚಹಲ್ ಹಾಗೂ ಶಶಾಂಕ್ ಸಿಂಗ್ ಕೂಡಾ ಪಾಲ್ಗೊಂಡಿದ್ದರು.
ಕಳೆದ ಬಾರಿ ಶ್ರೇಯಸ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಈ ಬಾರಿ ಹರಾಜಿನಲ್ಲಿ ಬರೋಬ್ಬರಿ 26.75 ಕೋಟಿಗೆ ಪಂಜಾಬ್ ತಂಡಕ್ಕೆ ಸೇರ್ಪಡೆಗೊಂಡಿದ್ದರು.