2026ರ ಟಿ 20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ: ಪಾಕಿಸ್ತಾನ, ನ್ಯೂಜಿಲೆಂಡ್‌ ಸಹ ಪ್ರವೇಶ

| Published : Jun 18 2024, 12:55 AM IST / Updated: Jun 18 2024, 04:31 AM IST

2026ರ ಟಿ 20 ವಿಶ್ವಕಪ್‌ಗೆ 12 ತಂಡಗಳಿಗೆ ನೇರ ಅರ್ಹತೆ: ಪಾಕಿಸ್ತಾನ, ನ್ಯೂಜಿಲೆಂಡ್‌ ಸಹ ಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

2026ರ ಟಿ20 ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ 12 ತಂಡಗಳು. ಈ ಟಿ20 ವಿಶ್ವಕಪ್‌ನ ಸೂಪರ್‌-8ಗೆ ಅರ್ಹತೆ ಪಡೆಯಲು ವಿಫಲವಾದ ನ್ಯೂಜಿಲೆಂಡ್‌, ಪಾಕಿಸ್ತಾನಕ್ಕೂ ಸಿಕ್ಕಿದೆ ಅರ್ಹತೆ.

ದುಬೈ: 2026ರಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ 12 ತಂಡಗಳು ನೇರ ಅರ್ಹತೆ ಪಡೆದಿವೆ.

2024ರ ವಿಶ್ವಕಪ್‌ನ ಸೂಪರ್‌-8 ಹಂತಕ್ಕೇರಿದ ತಂಡಗಳು ಅಂತಿಮವಾದ ಬೆನ್ನಲ್ಲೇ, 2026ರ ವಿಶ್ವಕಪ್‌ಗೆ ನೇರ ಪ್ರವೇಶ ಪಡೆದ ತಂಡಗಳು ಪ್ರಕಟಗೊಂಡಿವೆ.

ಭಾರತ ಹಾಗೂ ಶ್ರೀಲಂಕಾ ಆತಿಥೇಯ ರಾಷ್ಟ್ರಗಳಾಗಿ ಅರ್ಹತೆ ಪಡೆದರೆ, ಸೂಪರ್‌-8ಗೆ ಪ್ರವೇಶಿಸಿರುವ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ಬಾಂಗ್ಲಾದೇಶ ಹಾಗೂ ಅಮೆರಿಕ ಪ್ರವೇಶ ಪಡೆದಿವೆ.

ಇನ್ನು ಐಸಿಸಿ ಟಿ20 ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರ-12 ಸ್ಥಾನಗಳಲ್ಲಿ ಇರುವ ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ಐರ್ಲೆಂಡ್‌ ತಂಡಗಳಿಗೂ ನೇರ ಪ್ರವೇಶ ಸಿಕ್ಕಿದೆ. ಉಳಿದ 8 ತಂಡಗಳು ಯಾವುವು ಎನ್ನುವುದು ಅರ್ಹತಾ ಟೂರ್ನಿಗಳ ಮೂಲಕ ನಿರ್ಧಾರವಾಗಲಿದೆ.