4 ಓವರ್‌, 4 ಮೇಡನ್‌ : ಫರ್ಗ್ಯೂಸನ್‌ ದಾಖಲೆ!

| Published : Jun 18 2024, 12:47 AM IST / Updated: Jun 18 2024, 04:37 AM IST

ಸಾರಾಂಶ

ಟಿ20 ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ವೇಗಿ ಲಾಕಿ ಫರ್ಗ್ಯೂಸನ್‌ ಹೊಸ ವಿಶ್ವದಾಖಲೆ. ಪಪುವಾ ನ್ಯೂ ಗಿನಿ ವಿರುದ್ಧ 4 ಓವರಲ್ಲಿ 4 ಮೇಡನ್‌ ಜೊತೆ 3 ವಿಕೆಟ್‌ ಕಬಳಿಸಿದ ಕಿವೀಸ್‌ ವೇಗಿ.

ತರೌಬ: ಟಿ20 ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಎನ್ನುವ ದಾಖಲೆಯನ್ನು ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯೂಸನ್‌ ಬರೆದಿದ್ದಾರೆ.

ಸೋಮವಾರ ಪಪುವಾ ನ್ಯೂ ಗಿನಿ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಲಾಕಿ, 4 ಓವರಲ್ಲಿ 4 ಮೇಡನ್‌ ಎಸೆದು 3 ವಿಕೆಟ್‌ ಕಿತ್ತರು. ಟಿ20 ಪಂದ್ಯವೊಂದರಲ್ಲಿ 4 ಓವರ್‌ ಮೇಡನ್‌ ಹಾಕಿದ ವಿಶ್ವದ ಕೇವಲ 3ನೇ ಬೌಲರ್‌ ಲಾಕಿ. ಕೆನಡಾದ ಸಾದ್‌ ಝಫರ್‌, ವಿದರ್ಭದ ಅಕ್ಷಯ್‌ ಕರ್ನೇವಾರ್‌ ಸಹ ಈ ಸಾಧನೆ ಮಾಡಿದ್ದರು. ಅವರಿಬ್ಬರೂ ತಲಾ 2 ವಿಕೆಟ್‌ ಕಿತ್ತಿದ್ದರು.

ಸೋಮವಾರ ಬೆಳಗ್ಗೆ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಟಿ20 ವಿಶ್ವಕಪ್‌ನ ಪಂದ್ಯವೊಂದರಲ್ಲಿ ಅತಿಹೆಚ್ಚು ಡಾಟ್‌ಬಾಲ್‌ ಎಸೆದ ದಾಖಲೆಯನ್ನು ಬಾಂಗ್ಲಾದೇಶದ ತನ್ಜಿಮ್‌ ಹಸನ್‌ ಶಕೀಬ್‌ ಬರೆದಿದ್ದರು. ತನ್ಜಿಮ್‌ 4 ಓವರಲ್ಲಿ (24 ಎಸೆತ) ಬರೋಬ್ಬರಿ 21 ಡಾಟ್‌ಬಾಲ್‌ಗಳನ್ನು ಹಾಕಿದರು. ಆದರೆ ಅವರ ದಾಖಲೆಯನ್ನು ಸೋಮವಾರ ರಾತ್ರಿ ಲಾಕಿ ಮುರಿದರು.