ಸಾರಾಂಶ
ನವದೆಹಲಿ: 2023ರ ಐಪಿಎಲ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸಿದ್ದ 4 ತಂಡಗಳೂ ಈ ಬಾರಿ ಪ್ಲೇ-ಆಫ್‌ಗೇರಲು ವಿಫಲವಾಗಿದೆ. ಬೇರೆ 4 ತಂಡಗಳು ನಾಕೌಟ್ ಪ್ರವೇಶಿಸಿವೆ. ಕಳೆದ ವರ್ಷ ಗುಜರಾತ್, ಚೆನ್ನೈ, ಲಖನೌ ಹಾಗೂ ಮುಂಬೈ ಅಗ್ರ-4ರಲ್ಲಿ ಸ್ಥಾನ ಗಿಟ್ಟಿಸಿ ಪ್ಲೇ-ಆಫ್‌ಗೇರಿದ್ದವು.
ಫೈನಲ್‌ನಲ್ಲಿ ಗುಜರಾತ್‌ನ ಮಣಿಸಿ ಚೆನ್ನೈ ಚಾಂಪಿಯನ್ ಆಗಿತ್ತು. ಈ ಬಾರಿ ಕೋಲ್ಕತಾ, ರಾಜಸ್ಥಾನ, ಹೈದರಾಬಾದ್ ಹಾಗೂ ಆರ್‌ಸಿಬಿ ಪ್ಲೇ-ಆಫ್‌ಗೇರಿವೆ. ಈ ಪೈಕಿ ಕೋಲ್ಕತಾ 2, ರಾಜಸ್ಥಾನ, ಹೈದರಾಬಾದ್ ತಲಾ 1 ಬಾರಿ ಪ್ರಶಸ್ತಿ ಗೆದ್ದಿದ್ದು, ಆರ್‌ಸಿಬಿಗೆ ಮಾತ್ರ ಟ್ರೋಫಿ ಸಿಕ್ಕಿಲ್ಲ.
ಏಕೈಕ ವಿದೇಶಿ ಆಟಗಾರನ ಆಡಿಸಿದ ಪಂಜಾಬ್: ಐಪಿಎಲ್‌ನಲ್ಲಿ ಮೊದಲು
ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಏಕೈಕ ವಿದೇಶಿ ಆಟಗಾರನೊಂದಿಗೆ ಕಣಕ್ಕಿಳಿಯಿತು. ಭಾನುವಾರದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ರೀಲಿ ರುಸೌ ಪಂಜಾಬ್ ಪರ ಆಡಿದರು.
ಐಪಿಎಲ್‌ನಲ್ಲಿ ತಂಡವೊಂದು ಕೇವಲ ಓರ್ವ ವಿದೇಶಿ ಆಟಗಾರನೊಂದಿಗೆ ಕಣಕ್ಕಿಳಿದಿದ್ದು ಇದೇ ಮೊದಲು. ಖಾಯಂ ನಾಯಕ ಶಿಖರ್ ಧವನ್ ಗಾಯಗೊಂಡ ಬಳಿಕ ಇಂಗ್ಲೆಂಡ್‌ನ ಸ್ಯಾಮ್ ಕರ್ರನ್‌ಗೆ ನಾಯಕತ್ವ ವಹಿಸಲಾಗಿತ್ತು.
ಅವರ ಜೊತೆಗೆ ಜಾನಿ ಬೇರ್‌ಸ್ಟೋವ್, ಲಿವಿಂಗ್‌ಸ್ಟೋನ್ ಸೇರಿ ಬಹುತೇಕ ಎಲ್ಲಾ ವಿದೇಶಿಗರು ರಾಷ್ಟ್ರೀಯ ತಂಡ ಕೂಡಿಕೊಳ್ಳಲು ಈಗಾಗಲೇ ತವರಿಗೆ ಮರಳಿದ್ದರಿಂದ ರುಸೌ ಮಾತ್ರ ಲೀಗ್ ಹಂತದ ಕೊನೆ ಪಂದ್ಯದಲ್ಲಿ ಆಡಿದರು.