ಒಂದೇ ಓವರಲ್ಲಿ 43 ರನ್‌ ಬಿಟ್ಟುಕೊಟ್ಟ ರಾಬಿನ್ಸನ್‌!

| Published : Jun 27 2024, 01:00 AM IST / Updated: Jun 27 2024, 04:25 AM IST

ಸಾರಾಂಶ

ಲೀಚೆಸ್ಟರ್‌ಶೈರ್‌ನ ಬ್ಯಾಟರ್‌ ಲೂಯಿಸ್‌ ಕಿಂಬರ್‌ 37 ರನ್‌ ಸಿಡಿಸಿದರೆ, ಇನ್ನುಳಿದ 6 ರನ್‌ ನೋಬಾಲ್‌ ರೂಪದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದೆ. ಇಂಗ್ಲೆಂಡ್‌ ಕೌಂಟಿಯಲ್ಲಿ ನೋಬಾಲ್‌ಗೆ 2 ರನ್‌ ನೀಡಲಾಗುತ್ತದೆ.

ಬ್ರೈಟನ್‌: ಒಂದೇ ಓವರಲ್ಲಿ ಬರೋಬ್ಬರಿ 43 ರನ್‌ ದಾಖಲಾದ ಪ್ರಸಂಗ ಇಂಗ್ಲೆಂಡ್‌ ಕೌಂಟಿ ಕ್ರಿಕೆಟ್‌ನ ದ್ವಿತೀಯ ದರ್ಜೆ ಪಂದ್ಯದಲ್ಲಿ ನಡೆದಿದೆ. 

ಲೀಚೆಸ್ಟರ್‌ಶೈರ್‌ ವಿರುದ್ಧದ ಪಂದ್ಯದ 2ನೇ ಇನ್ನಿಂಗ್ಸ್‌ನ 53ನೇ ಓವರಲ್ಲಿ ಸಸೆಕ್ಸ್‌ನ ಓಲಿ ರಾಬಿನ್ಸನ್‌ ಬರೋಬ್ಬರಿ 43 ರನ್‌ ಬಿಟ್ಟುಕೊಟ್ಟಿ್‌ದಾರೆ. ಲೀಚೆಸ್ಟರ್‌ಶೈರ್‌ನ ಬ್ಯಾಟರ್‌ ಲೂಯಿಸ್‌ ಕಿಂಬರ್‌ 37 ರನ್‌ ಸಿಡಿಸಿದರೆ, ಇನ್ನುಳಿದ 6 ರನ್‌ ನೋಬಾಲ್‌ ರೂಪದಲ್ಲಿ ತಂಡಕ್ಕೆ ಸೇರ್ಪಡೆಗೊಂಡಿದೆ. 

ಇಂಗ್ಲೆಂಡ್‌ ಕೌಂಟಿಯಲ್ಲಿ ನೋಬಾಲ್‌ಗೆ 2 ರನ್‌ ನೀಡಲಾಗುತ್ತದೆ.ಓವರ್‌ನ ಮೊದಲ ಎಸೆತ ಸಿಕ್ಸರ್‌ಗಟ್ಟಿದ ಕಿಂಬರ್‌, ನೋಬಾಲ್‌ ಆದ 2ನೇ ಎಸೆತವನ್ನು ಬೌಂಡರಿ ಬಾರಿಸಿದರು. ನಂತರ 2 ಬೌಂಡರಿ, 1 ಸಿಕ್ಸರ್‌ ಚಚ್ಚಿದ ಕಿಂಬರ್‌, ಮತ್ತೊಂದು ನೋಬಾಲ್‌ನಲ್ಲೂ ಬೌಂಡರಿ ಬಾರಿಸಿದರು. ಬಳಿಕ ಒಂದು ಬೌಂಡರಿ ಚಚ್ಚಿದ ಕಿಂಬರ್‌, ನೋಬಾಲ್‌ ಆದ 6ನೇ ಎಸೆತವನ್ನೂ ಬೌಂಡರಿಗಟ್ಟಿದರು. ಕೊನೆಯ ಎಸೆತದಲ್ಲಿ ಒಂದು ರನ್‌ ಪಡೆದು, ಓವರಲ್ಲಿ 43 ರನ್‌ ದೋಚಿದರು. 

ಇದು ಪ್ರಥಮ ದರ್ಜೆ ಪಂದ್ಯವೊಂದರಲ್ಲಿ 2ನೇ ಅತಿ ದುಬಾರಿ ಓವರ್‌ ಎನಿಸಿದೆ. 1900ರಲ್ಲಿ ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ ತಂಡದ ಬರ್ಟ್‌ ವ್ಯಾನ್ಸ್‌ ಕ್ಯಾಂಟರ್‌ಬರ್ರಿ ವಿರುದ್ಧ ಒಂದೇ ಓವರಲ್ಲಿ 77 ರನ್‌ ಚಚ್ಚಿಸಿಕೊಂಡಿದ್ದು ವಿಶ್ವ ದಾಖಲೆಯಾಗಿ ಉಳಿದಿದೆ.