ಚೊಚ್ಚಲ ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್‌ ಶಿಪ್‌ ಗೆದ್ದ ಬೆಂಗಳೂರಿನ 16 ವರ್ಷದ ಅಭಯ್‌

| Published : Aug 19 2024, 12:56 AM IST / Updated: Aug 19 2024, 04:15 AM IST

ಸಾರಾಂಶ

4 ಸುತ್ತು ಸೇರಿ ಒಟ್ಟು 12 ರೇಸ್‌ಗಳ ಪೈಕಿ 16 ವರ್ಷದ ಅಭಯ್‌, ಸತತ 10 ರೇಸ್‌ ಗೆದ್ದು ಚಾಂಪಿಯನ್‌ಶಿಪ್‌ ತಮ್ಮದಾಗಿಸಿಕೊಂಡರು. ಮುಂಬೈನ ಝಹಾನ್‌ ಹಾಗೂ ರಾಜ್‌ ಬಖ್ರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ಚೆನ್ನೈ: ಬೆಂಗಳೂರಿನ ಅಭಯ್‌ ಮೋಹನ್‌ ಪ್ರತಿಷ್ಠಿತ ಫಾರ್ಮುಲಾ 1600 ರಾಷ್ಟ್ರೀಯ ಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ. ಭಾನುವಾರ ನಡೆದ ಭಾರತ ರಾಷ್ಟ್ರೀಯ ಕಾರ್‌ ರೇಸಿಂಗ್‌ ಚಾಂಪಿಯನ್‌ಶಿಪ್‌ನ 4ನೇ ಹಾಗೂ ಅಂತಿಮ ಸುತ್ತಿನಲ್ಲಿ ಅಭಯ್‌ ಅಮೋಘ ಪ್ರದರ್ಶನ ತೋರಿದರು. 4 ಸುತ್ತು ಸೇರಿ ಒಟ್ಟು 12 ರೇಸ್‌ಗಳ ಪೈಕಿ 16 ವರ್ಷದ ಅಭಯ್‌, ಸತತ 10 ರೇಸ್‌ ಗೆದ್ದು ಚಾಂಪಿಯನ್‌ಶಿಪ್‌ ತಮ್ಮದಾಗಿಸಿಕೊಂಡರು. ಮುಂಬೈನ ಝಹಾನ್‌ ಹಾಗೂ ರಾಜ್‌ ಬಖ್ರು ಕ್ರಮವಾಗಿ 2 ಹಾಗೂ 3ನೇ ಸ್ಥಾನ ಪಡೆದರು.

ವಿಂಡೀಸ್‌ ವಿರುದ್ಧ ಸತತ 10 ಟೆಸ್ಟ್‌ ಸರಣಿ ಜಯಿಸಿ ದ.ಆಫ್ರಿಕಾ ವಿಶ್ವ ದಾಖಲೆ!

ಪ್ರಾವಿಡೆನ್ಸ್‌ (ಗಯಾನ): ವೆಸ್ಟ್‌ಇಂಡೀಸ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ 40 ರನ್‌ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, 2 ಪಂದ್ಯಗಳ ಸರಣಿಯನ್ನು 1-0ಯಲ್ಲಿ ವಶಪಡಿಸಿಕೊಂಡಿತು. ಇದರೊಂದಿಗೆ ವಿಂಡೀಸ್‌ ವಿರುದ್ಧ ಸತತ 10ನೇ ಟೆಸ್ಟ್‌ ಸರಣಿ ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿತು. ಒಂದು ತಂಡದ ವಿರುದ್ಧ ಸತತವಾಗಿ ಅತಿ ಹೆಚ್ಚು ಟೆಸ್ಟ್‌ ಸರಣಿಗಳನ್ನು ಗೆದ್ದ ತಂಡ ಎನ್ನುವ ದಾಖಲೆ ಬರೆಯಿತು.

 ವಿಂಡೀಸ್‌ ವಿರುದ್ಧ 1998ರಿಂದ 2024ರ ವರೆಗೂ ದ.ಆಫ್ರಿಕಾ ಸತತ 10 ಸರಣಿ ಗೆದ್ದಿದೆ. ವಿಂಡೀಸ್‌ ವಿರುದ್ಧ 2002ರಿಂದ 2023ರ ವರೆಗೂ ಭಾರತ, 2000-2022ರ ವರೆಗೂ ಆಸ್ಟ್ರೇಲಿಯಾ ಸತತ 9 ಸರಣಿಗಳನ್ನು ಗೆದ್ದಿವೆ. ಶನಿವಾರ ಕೊನೆಗೊಂಡ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ 263 ರನ್‌ ಗುರಿ ಪಡೆದಿತ್ತು. ಆದರೆ 222ಕ್ಕೆ ಆಲೌಟಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ದ.ಆಫ್ರಿಕಾ 160, ವಿಂಡೀಸ್‌ 144ಕ್ಕೆ ಆಲೌಟಾಗಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಆಫ್ರಿಕಾ 246 ರನ್‌ ಕಲೆಹಾಕಿತ್ತು.