ಸಾರಾಂಶ
ನವದೆಹಲಿ: ಗೌತಮ್ ಗಂಭೀರ್ ಟೀಂ ಇಂಡಿಯಾದ ನೂತನ ಪ್ರಧಾನ ಕೋಚ್ ಆಗಿ ನೇಮಕಗೊಂಡ ಬೆನ್ನಲ್ಲೇ ಸಹಾಯಕ ಕೋಚ್‌ಗಳ ನೇಮಕದ ಬಗ್ಗೆ ಕುತೂಹಲ ಶುರುವಾಗಿದೆ. ಗಂಭೀರ್ ಜೊತೆ ಕೆಕೆಆರ್ ತಂಡದಲ್ಲಿ ಕೆಲಸ ಮಾಡಿದ, ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್‌ಗೆ ಬ್ಯಾಟಿಂಗ್ ಕೋಚ್ ಹುದ್ದೆ ಸಿಗಲಿದೆ ಎನ್ನಲಾಗುತ್ತಿದೆ. ನಾಯರ್‌ರ ಹೆಸರನ್ನು ಗಂಭೀರ್ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇ
\ದೇ ವೇಳೆ ಬೌಲಿಂಗ್ ಕೋಚ್ ಆಗಿ ಲಕ್ಷ್ಮೀಪತಿ ಬಾಲಾಜಿ ಅಥವಾ ಕರ್ನಾಟಕದ ವಿನಯ್ ಕುಮಾರ್‌ರನ್ನು ನೇಮಕ ಮಾಡುವಂತೆ ಗಂಭೀರ್ ಕೇಳಿದ್ದಾರೆ ಎನ್ನಲಾಗುತ್ತಿದೆಯಾದರೂ, ಈ ಬಗ್ಗೆ ಖಚಿತತೆ ಇಲ್ಲ. ದ್ರಾವಿಡ್‌ರ ಅವಧಿಯಲ್ಲಿ ಫೀಲ್ಡಿಂಗ್ ಕೋಚ್ ಆಗಿದ್ದ ಟಿ.ದಿಲೀಪ್, ಮತ್ತೊಂದು ಅವಧಿಗೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಿ20 ರ್‍ಯಾಂಕಿಂಗ್: 7ನೇ ಸ್ಥಾನಕ್ಕೇರಿದ ಋತುರಾಜ್
ದುಬೈ: ಭಾರತದ ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ 7ನೇ ಸ್ಥಾನಕ್ಕೇರಿದ್ದಾರೆ. ಅವರು ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್ ಪಟ್ಟಿಯಲ್ಲಿ 13 ಸ್ಥಾನ ಪ್ರಗತಿ ಸಾಧಿಸಿದರು. ತಾರಾ ಬ್ಯಾಟರ್ ಸೂರ್ಯಕುಮಾರ್ ಯಾದವ್ 2ನೇ ಸ್ಥಾನ ಕಾಯ್ದುಕೊಂಡಿದ್ದು, ಆಸ್ಟ್ರೇಲಿಯಾದ ಟ್ರ್ಯಾವಿಸ್ ಹೆಡ್ ಅಗ್ರಸ್ಥಾನದಲ್ಲಿದ್ದಾರೆ.
ಜಿಂಬಾಬ್ವೆ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ ಮೊದಲ ಬಾರಿ ರ್‍ಯಾಂಕಿಂಗ್ ಪಟ್ಟಿ ಪ್ರವೇಶಿಸಿದ್ದು, 75ನೇ ಸ್ಥಾನದಲ್ಲಿದ್ದಾರೆ. ಆದರೆ ಭಾರತದ ಬೌಲರ್‌ಗಳು ರ್‍ಯಾಂಕಿಂಗ್‌ನಲ್ಲಿ ಕುಸಿತ ಕಂಡಿದ್ದಾರೆ. ಅಕ್ಷರ್ 2 ಸ್ಥಾನ ಕುಸಿದು 9ನೇ, ಕುಲ್ದೀಪ್ 3 ಸ್ಥಾನ ಕುಸಿದು 11 ಹಾಗೂ ಬೂಮ್ರಾ 2 ಸ್ಥಾನ ಕೆಳಕ್ಕೆ ಜಾರಿ 14ನೇ ಸ್ಥಾನ ತಲುಪಿದ್ದಾರೆ.