ಏಷ್ಯಾಕಪ್‌ನಲ್ಲಿ ಪ್ರತಿ ಪಂದ್ಯದಲ್ಲೂ ಅಬ್ಬರಿಸುತ್ತಿರುವ ಏಕೈಕ ಬ್ಯಾಟರ್‌ ಅಂದರೆ ಅದು ಅಭಿಷೇಕ್‌ ಶರ್ಮಾ. ಪ್ರತಿ ಬಾರಿ ಬ್ಯಾಟಿಂಗ್‌ಗಿಳಿದಾಗಲೂ ಬೌಲರ್‌ಗಳ ಬೆವರಿಳಿಸುತ್ತಿರುವ ಅಭಿಷೇಕ್‌ ಈ ಟೂರ್ನಿಯಲ್ಲಿ ಕೆಲ ಪ್ರಮುಖ ದಾಖಲೆಗಳನ್ನೂ ಬರೆದಿದ್ದಾರೆ.

ದುಬೈ: ಏಷ್ಯಾಕಪ್‌ನಲ್ಲಿ ಪ್ರತಿ ಪಂದ್ಯದಲ್ಲೂ ಅಬ್ಬರಿಸುತ್ತಿರುವ ಏಕೈಕ ಬ್ಯಾಟರ್‌ ಅಂದರೆ ಅದು ಅಭಿಷೇಕ್‌ ಶರ್ಮಾ. ಪ್ರತಿ ಬಾರಿ ಬ್ಯಾಟಿಂಗ್‌ಗಿಳಿದಾಗಲೂ ಬೌಲರ್‌ಗಳ ಬೆವರಿಳಿಸುತ್ತಿರುವ ಅಭಿಷೇಕ್‌ ಈ ಟೂರ್ನಿಯಲ್ಲಿ ಕೆಲ ಪ್ರಮುಖ ದಾಖಲೆಗಳನ್ನೂ ಬರೆದಿದ್ದಾರೆ.

ಶ್ರೀಲಂಕಾ ವಿರುದ್ಧ ಶುಕ್ರವಾರ ನಡೆದ ಸೂಪರ್‌-4 ಹಂತದ ಕೊನೆಯ ಪಂದ್ಯದಲ್ಲಿ ಅಭಿಷೇಕ್‌ 31 ಎಸೆತದಲ್ಲಿ 61 ರನ್‌ ಸಿಡಿಸಿದರು. ಕೇವಲ 22 ಎಸೆತದಲ್ಲಿ ಅವರು ಅರ್ಧಶತಕ ಪೂರೈಸಿದರು.

ಟೂರ್ನಿಯಲ್ಲಿ 300 ರನ್‌ ದಾಟಿರುವ ಅಭಿಷೇಕ್‌, ಏಷ್ಯಾಕಪ್‌ ಟಿ20 ಟೂರ್ನಿಯ ಆವೃತ್ತಿಯೊಂದರಲ್ಲಿ 300 ಅಥವಾ ಅದಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದ ಮೊದಲ ಬ್ಯಾಟರ್‌ ಎನ್ನುವ ದಾಖಲೆಯನ್ನು ಬರೆದರು. ಈ ಟೂರ್ನಿಯಲ್ಲಿ 6 ಇನ್ನಿಂಗ್ಸ್‌ಗಳಲ್ಲಿ ಅಭಿಷೇಕ್‌ 309 ರನ್‌ ಕಲೆಹಾಕಿದ್ದಾರೆ.

ಗುಂಪು ಹಂತದಲ್ಲಿ ಯುಎಇ ವಿರುದ್ಧ 30, ಪಾಕಿಸ್ತಾನ ವಿರುದ್ಧ 31, ಒಮಾನ್‌ ವಿರುದ್ಧ 38 ರನ್‌ ಗಳಿಸಿದ್ದ ಅಭಿಷೇಕ್‌, ಸೂಪರ್‌-4 ಹಂತದ ಮೂರೂ ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದರು. ಪಾಕಿಸ್ತಾನ ವಿರುದ್ಧ 74, ಬಾಂಗ್ಲಾದೇಶ ವಿರುದ್ಧ 75, ಶ್ರೀಲಂಕಾ ವಿರುದ್ಧ 61 ರನ್‌ ಚಚ್ಚಿದರು. 06ನೇ ಬಾರಿ

ಅಭಿಷೇಕ್‌ ಅಂ.ರಾ. ಟಿ20ಯಲ್ಲಿ 6ನೇ ಬಾರಿಗೆ 25 ಅಥವಾ ಅದಕ್ಕಿಂತ ಕಡಿಮೆ ಎಸೆತದಲ್ಲಿ ಅರ್ಧಶತಕ ದಾಖಲಿಸಿದ್ದಾರೆ. --

ಟಿ20 ಏಷ್ಯಾಕಪ್‌ನಲ್ಲಿ ಗರಿಷ್ಠ ರನ್‌

ಆಟಗಾರ ದೇಶ ರನ್‌ ವರ್ಷ

ಅಭಿಷೇಕ್‌ಭಾರತ309*2025

ರಿಜ್ವಾನ್‌ಪಾಕಿಸ್ತಾನ2812022

ವಿರಾಟ್‌ ಕೊಹ್ಲಿಭಾರತ2762022

* ಫೈನಲ್‌ನಲ್ಲಿ ಅಭಿಷೇಕ್‌ ಆಟ ಬಾಕಿ ಇದೆ.

ಏಷ್ಯಾಕಪ್‌ನಲ್ಲಿ

ಸೂರ್ಯ ಫ್ಲಾಪ್‌ ಶೋ!

ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ ಟಿ20 ಮಾದರಿಯಲ್ಲಿ ಲಯ ಕಳೆದುಕೊಂಡು ಪರದಾಡುತ್ತಿದ್ದಾರೆ. ಎಷ್ಯಾಕಪ್‌ನಲ್ಲಂತೂ ಅವರು 5 ಇನ್ನಿಂಗ್ಸ್‌ಗಳಲ್ಲಿ ಕೇವಲ 71 ರನ್‌ ಕಲೆಹಾಕಿದ್ದಾರೆ. ಪಾಕಿಸ್ತಾನ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 47 ರನ್‌ ಗಳಿಸಿದ್ದೇ ಅವರ ಗರಿಷ್ಠ ಮೊತ್ತ. ಸೂರ್ಯ ಕಳೆದ 10 ಇನ್ನಿಂಗ್ಸಲ್ಲಿ ಕೇವಲ 99 ರನ್‌ ಗಳಿಸಿದ್ದು, ಅವರು ಅರ್ಧಶತಕ ಬಾರಿಸಿ 13 ಇನ್ನಿಂಗ್ಸ್‌ಗಳೇ ಕಳೆದಿವೆ.