ಸಾರಾಂಶ
ಕಿಂಗ್ಸ್‌ಟೌನ್(ಸೇಂಟ್ ವಿನ್ಸೆಂಟ್): ಈ ಬಾರಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳು ಸೂಪರ್-8 ಹಂತದ ಮಹತ್ವದ ಪಂದ್ಯದಲ್ಲಿ ಭಾನುವಾರ ಮುಖಾಮುಖಿಯಾಗಲಿವೆ.
ಸೆಮಿಫೈನಲ್ ದೃಷ್ಟಿಯಿಂದ ಇತ್ತಂಡಗಳಿಗೂ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ.ಗುಂಪು 1ರ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿರುವ ಆಸ್ಟ್ರೇಲಿಯಾಕ್ಕೆ ಕೊನೆ ಪಂದ್ಯದಲ್ಲಿ ಭಾರತದ ಸವಾಲು ಎದುರಾಗಲಿದೆ.
ಹೀಗಾಗಿ ಅಫ್ಘಾನಿಸ್ತಾನ ವಿರುದ್ಧ ದೊಡ್ಡ ಅಂತರದಲ್ಲಿ ಗೆದ್ದು ಸೆಮೀಸ್ ಹಾದಿ ಸುಗಮಗೊಳಿಸುವ ವಿಶ್ವಾಸದಲ್ಲಿದೆ. ಅತ್ತ ಆಫ್ಘನ್, ಆರಂಭಿಕ ಪಂದ್ಯದಲ್ಲಿ ಭಾರತ ವಿರುದ್ಧ ಪರಾಭವಗೊಂಡಿದ್ದು, ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಸೆಮಿಫೈನಲ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ.
ಸೋತರೆ ಅಂತಿಮ 4ರ ಘಟ್ಟ ಪ್ರವೇಶಿಸುವ ಅವಕಾಶ ಕ್ಷೀಣಿಸಲಿದೆ.ಉಭಯ ತಂಡಗಳು ಕೊನೆ ಬಾರಿ ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಗ್ಲೆನ್ ಮ್ಯಾಕ್ಸ್‌ವೆಲ್‌ರ ‘ಶತಮಾನದ ಇನ್ನಿಂಗ್ಸ್’ಗೆ ಸಾಕ್ಷಿಯಾಗಿದ್ದ ಪಂದ್ಯದಲ್ಲಿ ಆಸೀಸ್ ರೋಚಕ ಜಯಭೇರಿ ಬಾರಿಸಿತ್ತು. ಈಗ ಮತ್ತೊಂದು ಗೆಲುವಿನ ಕಾತರದಲ್ಲಿದೆ. ಆಫ್ಘನ್ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಪಂದ್ಯ ಆರಂಭ: ಬೆಳಗ್ಗೆ 6 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಹಾಟ್‌ಸ್ಟಾರ್.
;Resize=(128,128))
;Resize=(128,128))
;Resize=(128,128))