ಸಾರಾಂಶ
ನವದೆಹಲಿ: ಅಫ್ಘಾನಿಸ್ತಾನ ಕ್ರಿಕೆಟ್‌ಗೆ ಕಳೆದೊಂದು ದಶಕದಿಂದ ನೆರವು ನೀಡುತ್ತಿರುವ ಬಿಸಿಸಿಐ, ಇದೀಗ ನೇಪಾಳ ಕ್ರಿಕೆಟ್ ತಂಡಗಳಿಗೂ ಮೂಲಸೌಕರ್ಯ, ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ದಕ್ಷಿಣ ಏಷ್ಯಾದಲ್ಲಿ ಕ್ರಿಕೆಟ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಹಾಗೂ ಈ ಭಾಗದ ತಂಡಗಳನ್ನು ಬಲಿಷ್ಠಗೊಳಿಸಲು ಬಿಸಿಸಿಐ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿದುಬಂದಿದೆ. ಜೂನ್‌ನಲ್ಲಿ ಅಮೆರಿಕ, ವೆಸ್ಟ್‌ಇಂಡೀಸ್‌ನಲ್ಲಿ ನಡೆಯಲಿರುವ ಮುಂಬರುವ ಟಿ20 ವಿಶ್ವಕಪ್‌ಗೆ ತೆರಳುವ ಮುನ್ನ ನೇಪಾಳ ತಂಡ ನವದೆಹಲಿಯಲ್ಲಿ ಅಭ್ಯಾಸ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.ಶ್ರೀಲಂಕಾ ಬೃಹತ್ ಮೊತ್ತ
ಕೊಲಂಬೊ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಆಫ್ಘನ್‌ನ 198 ರನ್‌ಗೆ ಉತ್ತರವಾಗಿ ಲಂಕಾ 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 410 ರನ್ ಗಳಿಸಿದೆ. ಏಂಜೆಲೋ ಮ್ಯಾಥ್ಯೂಸ್ 141, ದಿನೇಶ್ ಚಾಂಡಿಮಾಲ್ 107 ರನ್ ಸಿಡಿಸಿದರು.
ಥಾಯ್ಲೆಂಡ್ ಮಾಸ್ಟರ್ಸ್: ಆಶ್ಮಿತಾ ಸವಾಲು ಅಂತ್ಯಬ್ಯಾಂಕಾಕ್: ಭಾರತದ ಯುವ ಶಟ್ಲರ್ ಅಶ್ಮಿತಾ ಚಾಲಿಹಾ ಇಲ್ಲಿ ನಡೆಯುತ್ತಿರುವ ಥಾಯ್ಲೆಂಡ್ ಮಾಸ್ಟರ್ಸ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಮಹಿಳಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ 24 ವರ್ಷದ ಆಶ್ಮಿತಾ, ವಿಶ್ವ ನಂ.17 ಸ್ಥಳೀಯ ಆಟಗಾರ ಸುಪನಿದಾ ಕೇಟ್ಥಾಂಗ್ ವಿರುದ್ಧ 13-21, 12-21 ಗೇಮ್‌ಗಳಲ್ಲಿ ಪರಭಾವಗೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.