ಸಾರಾಂಶ
ಜುಲೈನಲ್ಲಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜು.6ರಿಂದ 14ರ ವರೆಗೂ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ.
ಹರಾರೆ: ಜುಲೈನಲ್ಲಿ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಜು.6ರಿಂದ 14ರ ವರೆಗೂ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ ಎಂದು ಬಿಸಿಸಿಐ ಘೋಷಿಸಿದೆ. ಜೂನ್ 29ರಂದು ಮುಕ್ತಾಯಗೊಳ್ಳುವ ಟಿ20 ವಿಶ್ವಕಪ್‌ನಲ್ಲಿ ಆಡುವ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ದ್ವಿತೀಯ ದರ್ಜೆ ತಂಡವನ್ನು ಜಿಂಬಾಬ್ವೆಗೆ ಕಳುಹಿಸುವ ಸಾಧ್ಯತೆ ಇದೆ. ಜುಲೈ 6,7,10,13,14ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ.
ಇದು ಜಿಂಬಾಂಬ್ವೆ ಕ್ರಿಕೆಟ್ ಪುರನರುಜ್ಜೀವನಗೊಳ್ಳುವ ಸಮಯವಾಗಿರುವುದರಿಂದ ನಮ್ಮ ನೆರವು ಅವರಿಗೆ ಅಗತ್ಯವಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಿಳಿಸಿದ್ದಾರೆ. ತವರಿನಲ್ಲಿ ಭಾರತ ವಿರುದ್ಧದ ಸರಣಿ ಆಯೋಜನೆಗೆ ನಾವು ಉತ್ಸುಕರಾಗಿದ್ದು, ಟಿವಿಯಿಂದ ಒಂದು ವರ್ಷದಲ್ಲಿ ಬರುವ ಆದಾಯ, ಕೇವಲ ಈ ಸರಣಿಯ ಅವಧಿಯಲ್ಲಿ ನಮಗೆ ಬರಲಿದೆ ಎಂದು ಜಿಂಬಾಂಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ ಹೇಳಿದ್ದಾರೆ.ತಾರಾ ಕ್ರಿಕೆಟಿಗ ಆ್ಯಲೆನ್‌ಗೆಗನ್ ತೋರಿಸಿ ದರೋಡೆ!
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಪಾರ್ಲ್ ರಾಯಲ್ಸ್ ಪರ ಆಡುತ್ತಿರುವ ವೆಸ್ಟ್ ಇಂಡೀಸ್ ಆಲ್ರೌಂಡರ್ ಫ್ಯಾಬಿಯನ್ ಆ್ಯಲೆನ್‌ಗೆ ಪಿಸ್ತೂಲ್ ತೋರಿಸಿ ದರೋಡೆ ಮಾಡಲಾಗಿದೆ. ಜ.25ರಂದು ಅವರು ತಂಗಿದ್ದ ಹೋಟೆಲ್ ಸಮೀಪ ಘಟನೆ ನಡೆದಿದ್ದು, ಮೊಬೈಲ್, ಪರ್ಸ್ ಸೇರಿ ಕೆಲ ಬೆಲೆ ಬಾಳುವ ವಸ್ತುಗಳನ್ನು ಖದೀಮರು ದೋಚಿದ್ದಾರೆ. ಆ್ಯಲೆನ್‌ಗೆ ಯಾವುದೇ ಅಪಾಯವಾಗಿಲ್ಲ. ತಂಡದ ಜೊತೆಗಿದ್ದಾರೆ ಎಂದು ಫ್ರಾಂಚೈಸಿ ತಿಳಿಸಿದೆ.