ಅಗಸ್ಟ್‌ 23-27ರ ವರೆಗೂ ದ.ಕೊರಿಯಾದಲ್ಲಿ ಸ್ಪರ್ಧೆ. 2022ರ ಜುಲೈನಲ್ಲಿ ಬೆಂಗಳೂರಲ್ಲಿ ನಡೆದಿದ್ದ ಏಷ್ಯಾ ಓಷಿಯಾನಿಯಾ 24 ಗಂಟೆಗಳ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಅಶ್ವಿನಿ.

 ಬೆಂಗಳೂರು : 2024ರ ಅಕ್ಟೋಬರ್ 23 ರಿಂದ 27 ರವರೆಗೆ ದಕ್ಷಿಣ ಕೊರಿಯಾದ ಉಲ್ಜುನಲ್ಲಿ ನಡೆಯಲಿರುವ ಏಷ್ಯಾ ಪೆಸಿಫಿಕ್ ಟ್ರೈಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಅಲ್ಟ್ರಾ ಮ್ಯಾರಥಾನ್‌ ಓಟಗಾರ್ತಿ ಅಶ್ವಿನಿ ಗಣಪತಿ ಭಟ್‌ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಅಂತಾರಾಷ್ಟ್ರೀಯ ಟ್ರೈಲ್‌ ರನ್ನಿಂಗ್‌ ಸಂಸ್ಥೆ (ಐಟಿಆರ್‌ಎ) ರೇಟಿಂಗ್‌ ಆಧಾರದಲ್ಲಿ ಭಾರತೀಯ ಟ್ರೈಲ್‌ ರನ್ನಿಂಗ್ ಸಂಸ್ಥೆ ತಂಡವನ್ನು ಆಯ್ಕೆ ಮಾಡಿದೆ. ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು 80 ಕಿ.ಮೀ. ಉದ್ದದ ಟ್ರೈಲ್‌ ವಿಭಾಗದಲ್ಲಿ 3 ಪುರುಷರು ಮತ್ತು ಒಬ್ಬ ಮಹಿಳೆ (ಅಶ್ವಿನಿ) ಒಳಗೊಂಡಿದ್ದರೆ, 40 ಕಿ.ಮೀ. ಶಾರ್ಟ್ ಟ್ರೈಲ್‌ ವಿಭಾಗದಲ್ಲಿ 5 ಪುರುಷರು ಮತ್ತು ಒಬ್ಬ ಮಹಿಳೆ ಇದ್ದಾರೆ.ಅಶ್ವಿನಿ, 2022ರ ಜುಲೈನಲ್ಲಿ ಬೆಂಗಳೂರಲ್ಲಿ ನಡೆದಿದ್ದ ಏಷ್ಯಾ ಓಷಿಯಾನಿಯಾ 24 ಗಂಟೆಗಳ ಓಟದ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

ಏನಿದು ಟ್ರೈಲ್ ಓಟ?

ಟ್ರೈಲ್‌ ಓಟವು ಸಾಮಾನ್ಯವಾಗಿ ಅರಣ್ಯ, ಪರ್ವತಗಳ ಭೂಪ್ರದೇಶದಲ್ಲಿ ನಡೆಯುವ ಸ್ಪರ್ಧೆಯಾಗಿದೆ. ಗಣನೀಯ ಪ್ರಮಾಣದಲ್ಲಿ ಆರೋಹಣ, ಅವರೋಹಣಗಳು ಇರಲಿವೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅಥ್ಲೀಟ್‌ಗಳು ಉತ್ಕೃಷ್ಟ ಮಟ್ಟದ ಫಿಟ್ನೆಸ್‌ ಹೊಂದಿರಬೇಕಾಗುತ್ತದೆ.

ಆ.16ರಿಂದ ಮೈಸೂರಲ್ಲಿ ರಾಜ್ಯ ವೇಟ್‌ಲಿಫ್ಟಿಂಗ್‌ ಕೂಟ

ಮೈಸೂರು: ಮೈಸೂರು ಜಿಲ್ಲಾ ವೇಟ್‌ಲಿಫ್ಟಿಂಗ್‌ ಸಂಸ್ಥೆ ಆಯೋಜಿಸುವ ಕರ್ನಾಟಕ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ ಆ.16ರಿಂದ 18ರ ವರೆಗೆ ಮೈಸೂರಿನಲ್ಲಿ ನಡೆಯಲಿದೆ. ಎಸ್‌ಬಿಆರ್‌ಆರ್‌ ಮಹಾರಾಜ ಕಾಲೇನಿನ ಎಪಿಜೆ ಅಬ್ದುಲ್‌ ಕಲಾಂ ಒಳಾಂಗಣ ಕ್ರೀಡಾಂಗಣದಲ್ಲಿ ಕೂಟ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.