ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ನಲ್ಲಿ ಆತಿಥೇಯ ಕತಾರ್‌ ಸತತ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ನಡೆದ ಜೋರ್ಡನ್‌ ವಿರುದ್ಧದ ರೋಚಕ ಫೈನಲ್‌ ಹಣಾಹಣಿಯಲ್ಲಿ ಕತಾರ್‌ 3-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು.

ಲುಸೈಲ್‌(ಕತಾರ್‌): ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ನಲ್ಲಿ ಆತಿಥೇಯ ಕತಾರ್‌ ಸತತ 2ನೇ ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ನಡೆದ ಜೋರ್ಡನ್‌ ವಿರುದ್ಧದ ರೋಚಕ ಫೈನಲ್‌ ಹಣಾಹಣಿಯಲ್ಲಿ ಕತಾರ್‌ 3-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಅಕ್ರಂ ಅಫೀಫ್‌ ತಮಗೆ ಲಭಿಸಿದ ಮೂರೂ ಪೆನಾಲ್ಟಿ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿ ಕತಾರ್‌ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ ಫೈನಲ್‌ಗೇರಿದ್ದ 2 ಬಾರಿಯೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಜೋರ್ಡನ್‌ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.ಫುಟ್ಬಾಲ್‌: ಬೆಂಗಳೂರು ಜಮ್ಶೇಡ್‌ಪುರ 1-1 ಡ್ರಾಜಮ್ಶೇಡ್‌ಪುರ: ಬೆಂಗಳೂರು ಎಫ್‌ಸಿ ಹಾಗೂ ಜಮ್ಶೇಡ್‌ಪುರ ಎಫ್‌ಸಿ ನಡುವಿನ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ಬಿಎಫ್‌ಸಿ 15 ಪಂದ್ಯಗಳಲ್ಲಿ 15 ಅಂಕಗಳೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಜಮ್ಶೇಡ್‌ಪುರ 14 ಅಂಕದೊಂದಿಗೆ 8ನೇ ಸ್ಥಾನದಲ್ಲೇ ಉಳಿದಿದೆ. ಬಿಎಫ್‌ಸಿ ಪರ ಸುರೇಶ್‌ ಸಿಂಗ್‌ 14ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಜಮ್ಶೇಡ್‌ಪುರದ ಜೇವಿಯರ್‌ 70ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಪಂದ್ಯ ಸಮಬಲಗೊಂಡಿತು.