ಏಷ್ಯನ್ ಪ್ಯಾರಾ ಗೇಮ್ಸ್‌ ವಿಜೇತರಿಗೆ ಬ್ಲಾಕ್‌ಬೆರ್ರೀಸ್‌ನಿಂದ ಸನ್ಮಾನ

| Published : Feb 06 2024, 01:34 AM IST

ಏಷ್ಯನ್ ಪ್ಯಾರಾ ಗೇಮ್ಸ್‌ ವಿಜೇತರಿಗೆ ಬ್ಲಾಕ್‌ಬೆರ್ರೀಸ್‌ನಿಂದ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ವಿಜೇತರನ್ನು ಪುರುಷರ ಉಡುಪುಗಳ ಖ್ಯಾತ ಕಂಪನಿ ಬ್ಲಾಕ್‌ಬೆರ್ರೀಸ್‌ ವತಿಯಿಂದ ಬೆಂಗಳೂರಿನ ಇಂದಿರಾ ನಗರದಲ್ಲಿರುವ ಮಳಿಗೆಯಲ್ಲಿ ಸನ್ಮಾನಿಸಲಾಯಿತು.

ಬೆಂಗಳೂರು: 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಪದಕ ವಿಜೇತರನ್ನು ಪುರುಷರ ಉಡುಪುಗಳ ಖ್ಯಾತ ಕಂಪನಿ ಬ್ಲಾಕ್‌ಬೆರ್ರೀಸ್‌ ವತಿಯಿಂದ ಬೆಂಗಳೂರಿನ ಇಂದಿರಾ ನಗರದಲ್ಲಿರುವ ಮಳಿಗೆಯಲ್ಲಿ ಸನ್ಮಾನಿಸಲಾಯಿತು. ಗುವಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 1500 ಮೀ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ದೃಷ್ಟಿ ವಿಕಲಚೇತನ ಓಟಗಾರ್ತಿ ರಕ್ಷಿತಾ ರಾಜು, 1500 ಮೀ. ಓಟದಲ್ಲಿ ಬೆಳ್ಳಿ ಪದಕ ಗೆದ್ದ ಶರತ್‌ ಮಾಕನಹಳ್ಳಿ, ಏಷ್ಯನ್ ಪ್ಯಾರಾ-ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ ಮನಿಶಾ ರಾಮದಾಸ್ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಪ್ಯಾರಾ ಅಥ್ಲೆಟಿಕ್ಸ್ ಕೋಚ್‌ ಸತ್ಯನಾರಾಯಣ, ಬ್ಲಾಕ್‌ಬೆರ್ರೀಸ್‌ ಪ್ಯಾರಾ ಅಥ್ಲಿಟ್‌ಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಭಾಗಿತ್ವ ವಹಿಸಿದ್ದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದರು.ರಕ್ಷಿತಾ ರಾಜು ಮಾತನಾಡಿ, ಇತ್ತೀಚೆಗೆ ಕ್ರೀಡಾ ಕ್ಷೇತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಅದರಲ್ಲೂ ಪ್ಯಾರಾ ಅಥ್ಲಿಟ್‌ಗಳಿಗೆ ಇತ್ತೀಚಿನ ದಿನಗಳಲ್ಲಿ ನೆರವು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿದೆ. ಈ ಸಾಧನೆಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭೇಟಿಯಾಗಿ ಪ್ರೋತ್ಸಾಹಿಸಿದ್ದರು. ನಮ್ಮ ಅನುಭವ ಬಗ್ಗೆ ಹಲವು ನಿಮಿಷಗಳ ಕಾಲ ಕೇಳಿ ತಿಳಿದುಕೊಂಡರು. ಅವರ ಪ್ರೋತ್ಸಾಹ ನನಗೆ ಸಾಧನೆ ಮಾಡುವ ಛಲವನ್ನು ಇಮ್ಮಡಿಗೊಳಿಸಿದ್ದು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಗೆದ್ದು ಪ್ರಧಾನಿಗಳಿಗೆ ಉಡುಗುರೆ ನೀಡುತ್ತೇನೆ ಎಂದರು.ಬ್ಲಾಕ್‌ಬೆರ್ರೀಸ್‌ ಬ್ರ್ಯಾಂಡ್‌ ಮ್ಯಾನೇಜರ್‌ ಅಭಿಷೇಕ್‌ ಮಿಶ್ರಾ ಮಾತನಾಡಿ, ಹಾಂಗ್‌ಝೌನಲ್ಲಿ 2023 ಅಕ್ಟೋಬರ್ 22 ರಿಂದ 28 ರವರೆಗೆ ನಡೆದ 4ನೇ ಏಷ್ಯನ್ ಪ್ಯಾರಾ ಗೇಮ್ಸ್‌ 2022 ರಲ್ಲಿ 111 ಪದಕಗಳನ್ನು ಗೆದ್ದು ತಂದ ಭಾರತ ತಂಡ ಸದಸ್ಯರಿಗೆ ಗೌರವಿಸುವುದು ಸಂತೋಷದ ವಿಷಯವಾಗಿದೆ. ಇನ್ನು ಹೆಚ್ಚು ಪದಕಗಳನ್ನು ಮುಂಬರುವ ವರ್ಷಗಳಲ್ಲಿ ಗೆಲ್ಲಲಿ ಎಂದು ಶುಭ ಹಾರೈಸಿದರು.ಬ್ಲಾಕ್‌ಬೆರ್ರೀಸ್‌ ಭಾರತೀಯ ಪ್ಯಾರಾಲಿಂಪಿಕ್ ಸಮಿತಿ (ಪಿಸಿಐ) ಸಹಭಾಗಿತ್ವದಲ್ಲಿ ಅಧಿಕೃತ ಸೆರೆಮೋನಿಯಲ್ ಪಾಲುದಾರನಾಗಿತ್ತು ಮತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತೀಯ ತಂಡಕ್ಕೆ ಉಡುಪನ್ನು ಸಿದ್ಧಪಡಿಸಿಕೊಟ್ಟಿತ್ತು.