ಕೊನೆ ಬಾಲ್‌ ಥ್ರಿಲ್ಲರ್‌ ಗೆದ್ದ ಆಸ್ಟ್ರೇಲಿಯಾ

| Published : Feb 22 2024, 01:52 AM IST / Updated: Feb 22 2024, 11:35 AM IST

Australia Won by 6 Wicket

ಸಾರಾಂಶ

ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್‌ ಜಯ ಸಾಧಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. 

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 3 ವಿಕೆಟ್‌ಗೆ 215 ರನ್‌ ಕಲೆಹಾಕಿತು. ತಂಡದ ಇನ್ನಿಂಗ್ಸಲ್ಲಿ 13 ಸಿಕ್ಸರ್‌, 10 ಬೌಂಡರಿಗಳಿದ್ದವು. ದೊಡ್ಡ ಗುರಿ ಬೆನ್ನತ್ತಿದ ಆಸೀಸ್‌ಗೆ ನಾಯಕ ಮಿಚೆಲ್‌ ಮಾರ್ಷ್ ಆಸರೆಯಾದರು. 

44 ಎಸೆತದಲ್ಲಿ 72 ರನ್‌ ಸಿಡಿಸಿದರು. ಆದರೂ ಕೊನೆಯ ಓವರಲ್ಲಿ ಗೆಲ್ಲಲು 16 ರನ್‌ ಬೇಕಿತ್ತು. ಟಿಮ್‌ ಡೇವಿಡ್‌ ತಂಡವನ್ನು ಜಯದ ದಡ ಸೇರಿಸಿದರು. 

ಕೊನೆಯ ಎಸೆತದಲ್ಲಿ 4 ರನ್‌ ಬೇಕಿದ್ದಾಗ ಡೇವಿಡ್‌ ಬೌಂಡರಿ ಬಾರಿಸಿದರು. ಅವರು 10 ಎಸೆತದಲ್ಲಿ 31 ರನ್‌ ಸಿಡಿಸಿ ಔಟಾಗದೆ ಉಳಿದರು.

ಸ್ಕೋರ್‌: ನ್ಯೂಜಿಲೆಂಡ್‌ 215/3, ಆಸ್ಟ್ರೇಲಿಯಾ 216/4==01ನೇ ತಂಡಸತತ 4 ಟಿ20 ಪಂದ್ಯಗಳಲ್ಲಿ 200ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟ ಮೊದಲ ತಂಡ ಆಸ್ಟ್ರೇಲಿಯಾ.

ರಣಜಿ ಗೆಲ್ಲಿ, ಬಿಎಂಡಬ್ಲ್ಯು ಪಡೀರಿ: ಆಟಗಾರರಿಗೆ ಹೈದರಾಬಾದ್‌ ಆಫರ್‌!
ಹೈದರಾಬಾದ್: ಪ್ಲೇಟ್‌ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಮುಂದಿನ ವರ್ಷ ಎಲೈಟ್‌ ಗುಂಪಿನಲ್ಲಿ ಆಡಲು ಅರ್ಹತೆ ಪಡೆದಿರುವ ಹೈದರಾಬಾದ್‌ ತಂಡಕ್ಕೆ ಅಲ್ಲಿನ ರಾಜ್ಯ ಕ್ರಿಕೆಟ್‌ ಸಂಸ್ಥೆ (ಎಚ್‌ಸಿಎ) ಭರ್ಜರಿ ಆಫರ್‌ವೊಂದನ್ನು ನೀಡಿದೆ. 

ಮುಂದಿನ 3 ವರ್ಷಗಳಲ್ಲಿ ರಣಜಿ ಟ್ರೋಫಿ ಗೆದ್ದರೆ ತಂಡಕ್ಕೆ 1 ಕೋಟಿ ರು., ಪ್ರತಿ ಆಟಗಾರರಿಗೂ ಬಿಎಂಡಬ್ಲ್ಯು ಕಾರು ಬಹುಮಾನ ನೀಡುವುದಾಗಿ ಎಚ್‌ಸಿಎ ಅಧ್ಯಕ್ಷ ಜಗನ್‌ ಮೋಹನ್‌ ಘೋಷಿಸಿದ್ದಾರೆ.