ಆಸ್ಟ್ರೇಲಿಯನ್‌ ಓಪನ್‌ ಮುಖ್ಯ ಸುತ್ತಿಗೇರಿದ ಸುಮಿತ್‌ ನಗಾಲ್‌

| Published : Jan 13 2024, 01:35 AM IST

ಆಸ್ಟ್ರೇಲಿಯನ್‌ ಓಪನ್‌ ಮುಖ್ಯ ಸುತ್ತಿಗೇರಿದ ಸುಮಿತ್‌ ನಗಾಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ಖ್ಯಾತ ಟೆನಿಸ್‌ ತಾರೆ ಸುಮಿತ್‌ ನಗಾಲ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 2021ರಲ್ಲೂ ಆಸ್ಟ್ರೇಲಿಯನ್‌ ಓಪನ್‌ನ ಪ್ರಧಾನ ಸುತ್ತಿನಲ್ಲಿ ಆಡಿದ್ದ ಸುಮಿತ್‌, ಮೊದಲ ಸುತ್ತಿನಲ್ಲೇ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌ ವಿರುದ್ಧ ಸೋತು ಹೊರ ಬಿದ್ದಿದ್ದರು.

ಮೆಲ್ಬೋರ್ನ್‌: ಭಾರತದ ಅಗ್ರ ಟೆನಿಸಿಗ ಸುಮಿತ್‌ ನಗಾಲ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿಗೇರಿದ್ದಾರೆ. ಶುಕ್ರವಾರ ನಡೆದ ಅರ್ಹತಾ ಸುತ್ತಿನ ಅಂತಿಮ ಹಣಾಹಣಿಯಲ್ಲಿ ಸ್ಲೋವೇಕಿಯಾದ ಅಲೆಕ್ಸ್‌ ಮಾಲ್ಕನ್‌ ವಿರುದ್ಧ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಪ್ರಧಾನ ಸುತ್ತಿಗೆ ಲಗ್ಗೆ ಇಟ್ಟರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 139ನೇ ಸ್ಥಾನದಲ್ಲಿರುವ ನಗಾಲ್‌, ಪ್ರಧಾನ ಸುತ್ತಿನ ಮೊದಲ ಪಂದ್ಯದಲ್ಲಿ ವಿಶ್ವ ನಂ.31, ಕಜಕಿಸ್ತಾನದ ಅಲೆಕ್ಸಾಂಡರ್‌ ಬುಬ್ಲಿಕ್‌ರನ್ನು ಎದುರಿಸಲಿದ್ದಾರೆ. 2021ರಲ್ಲೂ ಆಸ್ಟ್ರೇಲಿಯನ್‌ ಓಪನ್‌ನ ಪ್ರಧಾನ ಸುತ್ತಿನಲ್ಲಿ ಆಡಿದ್ದ ಸುಮಿತ್‌, ಮೊದಲ ಸುತ್ತಿನಲ್ಲೇ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌ ವಿರುದ್ಧ ಸೋತು ಹೊರ ಬಿದ್ದಿದ್ದರು. ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯ ಪ್ರಧಾನ ಸುತ್ತಿನಲ್ಲಿ ಅವರು ಆಡುತ್ತಿರುವುದು ಇದು 2ನೇ ಬಾರಿ. 2019 ಮತ್ತು 2020ರಲ್ಲಿ ಯುಎಸ್‌ ಓಪನ್ ಗ್ರಾಂಡ್‌ ಸ್ಲಾಮ್‌ನಲ್ಲಿ ಪ್ರಶಸ್ತಿ ಸುತ್ತಿಗೇರಿದ್ದರು. ಗುರುವಾರ ಆಸ್ಟ್ರೇಲಿಯಾದ ಎಡ್ವರ್ಡ್‌ ವಿಂಟರ್‌ ಅವರನ್ನು 6-3,6-2 ರಿಂದ ಸೋಲಿಸುವ ಮೂಲಕ ಅರ್ಹತಾ ಸುತ್ತಿನ ಅಂತಿಮ ಹಂತಕ್ಕೆ ಸುಮಿತ್‌ ನಗಾಲ್‌ ಲಗ್ಗೆ ಇಟ್ಟಿದ್ದರು.