ಸಾರಾಂಶ
ಮೆಲ್ಬರ್ನ್: ಟೆನಿಸ್ ಲೋಕದಲ್ಲಿ ಮತ್ತೋರ್ವ ಯುವ ಸೂಪರ್‌ಸ್ಟಾರ್‌ನ ಉದಯವಾಗಿದೆ. ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಇಟಲಿಯ ಯಾನ್ನಿಕ್ ಸಿನ್ನರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ 22ರ ಸಿನ್ನರ್, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ವಿರುದ್ಧ 3-6, 3-6, 6-4, 6-4, 6-3 ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಆರಂಭಿಕ 2 ಸೆಟ್ ಗೆದ್ದ ಹೊರತಾಗಿಯೂ ಸಿನ್ನರ್‌ರ ಪ್ರಬಲ ಹೊಡೆತಗಳನ್ನು ಎದುರಿಸಲಾಗದೆ ಮೆಡ್ವೆಡೆವ್ ಮಂಡಿಯೂರಿದರು.ಇದರೊಂದಿಗೆ 2021ರ ಯುಎಸ್ ಓಪನ್ ಚಾಂಪಿಯನ್ ಮೆಡ್ವೆಡೆವ್‌ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಕನಸು 3ನೇ ಬಾರಿಯೂ ಭಗ್ನಗೊಂಡಿತು. ಈ ಮೊದಲು 2021, 2022ರಲ್ಲಿ ಕ್ರಮವಾಗಿ ಜೋಕೋವಿಚ್, ರಾಫೆನ್ ನಡಾಲ್ ವಿರುದ್ಧ ಫೈನಲ್‌ನಲ್ಲಿ ಸೋತಿದ್ದರು.
ಚೊಚ್ಚಲ ಪ್ರಯತ್ನದಲ್ಲೇ ಪ್ರಶಸ್ತಿ: ಸಿನ್ನರ್ ಇದೇ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ್ದರು. ಚೊಚ್ಚಲ ಪ್ರಯತ್ನದಲ್ಲೇ ಅವರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್(2020), ಯುಎಸ್ ಓಪನ್(2022)ನಲ್ಲಿ ಕ್ವಾರ್ಟರ್, 2023ರ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.3ನೇ ಟೆನಿಸಿಗಸಿನ್ನರ್ ಗ್ರ್ಯಾನ್‌ಸ್ಲಾಂ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇಟಲಿಯ 3ನೇ ಟೆನಿಸಿಗ. ನಿಕೋಲ್ ಪೀಟ್ರಾಂಗೆಲಿ 1959, 1960ರಲ್ಲಿ, ಆಡ್ರಿಯಾನೊ ಪನಾಟ್ಟ 1976ರಲ್ಲಿ ಫ್ರೆಂಚ್ ಓಪನ್ ಗೆದ್ದಿದ್ದರು.