ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ರಾಷ್ಟ್ರೀಯ ಗೇಮ್ಸ್‌ ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಿತು.

ಬೆಂಗಳೂರು : ಒಲಿಂಪಿಕ್ಸ್‌, ಪ್ಯಾರಾಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌, ರಾಷ್ಟ್ರೀಯ ಗೇಮ್ಸ್‌ ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರಮುಖ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಕರ್ನಾಟಕದ ಕ್ರೀಡಾಪಟುಗಳನ್ನು ರಾಜ್ಯ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸಿತು.

ಸೋಮವಾರ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಧಕರನ್ನು ಸನ್ಮಾನಿಸಿದರು. ಒಟ್ಟು 30 ಮಂದಿಗೆ 2022 ಮತ್ತು 2023ನೇ ಸಾಲಿನ ಏಕಲವ್ಯ ಪ್ರಶಸ್ತಿ, 15 ಮಂದಿಗೆ 2022 ಹಾಗೂ 2023ನೇ ಸಾಲಿನ ಕರ್ನಾಟಕ ಕ್ರೀಡಾ ರತ್ನ, 9 ಮಂದಿಗೆ 2022 ಮತ್ತು 2023ನೇ ಸಾಲಿನ ಜೀವಮಾನ ಸಾಧನೆ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆಗೆ 2023ನೇ ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಹಸ್ತಾಂತರಿಸಲಾಯಿತು.

ಅಥ್ಲೆಟಿಕ್ಸ್‌ ತಾರೆಗಳಾದ ಪ್ರಿಯಾ ಮೋಹನ್‌, ನಿಹಾಲ್‌ ಜೋಯೆಲ್‌, ಬ್ಯಾಡ್ಮಿಂಟನ್‌ ಪಟು ಮಿಥುನ್‌ ಮಂಜುನಾಥ್‌, ಸಾಯಿ ಪ್ರತೀಕ್, ಶೂಟರ್‌ ದಿವ್ಯಾ ಟಿ.ಎಸ್‌., ಹಾಕಿ ತಾರೆಗಳಾದ ಮೊಹಮ್ಮದ್‌ ರಾಹೀಲ್‌ ಮೌಸೀನ್‌, ಆಭರಣ್‌ ಸುದೇವ್‌, ಈಜು ಪಟು ಅನೀಶ್‌ ಗೌಡ, ಟೆನಿಸ್‌ ಆಟಗಾರ ಪ್ರಜ್ವಲ್‌ ದೇವ್‌, ಪ್ಯಾರಾ ಅಥ್ಲೀಟ್‌ ರಕ್ಷಿತಾ ರಾಜು, ಗಾಲ್ಫ್‌ ಪಟು ಅದಿತಿ ಅಶೋಕ್‌ ಸೇರಿ ಪ್ರಮುಖರು ಏಕಲವ್ಯ ಪ್ರಶಸ್ತಿಗೆ ಭಾಜನರಾದರು. ಖೋ ಖೋ ಪಟುಗಳಾದ ಗೌತಮ್‌ ಎಂ.ಕೆ., ಚೈತ್ರಾ, ಯೋಗ ಪಟು ಮೊಹಮ್ಮದ್‌ ಫಿರೋಜ್‌ ಶೇಖ್‌, ಕಬಡ್ಡಿ ಆಟಗಾರ ವಿಠಲ್ ಮೇಟಿ ಸೇರಿ ಹಲವರಿಗೆ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ನೀಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಪ್ರಶಸ್ತಿ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಿ, ಏಕಲವ್ಯ ಪ್ರಶಸ್ತಿಯ ಹಿನ್ನಲೆಯನ್ನೂ ವಿವರಿಸಿದರು. ‘ರಾಜ್ಯ ಸರ್ಕಾರವು ಕ್ರೀಡಾಪಟುಗಳ ಕಲ್ಯಾಣಕ್ಕೆ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದರೆ ₹6 ಕೋಟಿ, ಬೆಳ್ಳಿ ಗೆದ್ದರೆ ₹4 ಕೋಟಿ, ಕಂಚು ವಿಜೇತರಿಗೆ ₹2 ಕೋಟಿ ನಗದು ಬಹುಮಾನ ನೀಡುತ್ತೇವೆ. ಅದೇ ರೀತಿ ಏಷ್ಯನ್‌ ಗೇಮ್ಸ್‌ ಹಾಗೂ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನ ಗೆದ್ದರೆ ₹35 ಲಕ್ಷ, ಬೆಳ್ಳಿ ಗೆದ್ದರೆ ₹25 ಲಕ್ಷ, ಕಂಚು ಗೆದ್ದರೆ ₹15 ಲಕ್ಷ ನಗದು, ಸರ್ಕಾರಿ ಹುದ್ದೆ ನೀಡುತ್ತೇವೆ. ಕ್ರೀಡಾಪಟುಗಳಿಗೆ ಅಗತ್ಯವಾದ ಉತ್ತಮ ಗುಣಮಟ್ಟದ ಕ್ರೀಡಾ ಮೂಲಸೌಕರ್ಯ, ತರಬೇತಿ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಪುನರುಚ್ಚರಿಸಿದರು.

ಕಾರ್ಯಕ್ರಮದಲ್ಲಿ ಫಿಬಾ ಏಷ್ಯಾ ಅಧ್ಯಕ್ಷ, ರಾಜ್ಯ ಒಲಿಂಪಿಕ್‌ ಸಂಸ್ಥೆ ಅಧ್ಯಕ್ಷ, ವಿಧಾನಪರಿಷತ್‌ ಸದಸ್ಯ ಡಾ.ಕೆ. ಗೋವಿಂದರಾಜು, ಕ್ರೀಡಾ ಇಲಾಖೆ ಆಯುಕ್ತ ಆರ್‌.ಚೇತನ್‌, ಸರ್ಕಾರದ ಪ್ರಧಾನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌, ಸಚಿವ ರಾಮಲಿಂಗಾ ರೆಡ್ಡಿ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್‌, ಶಾಸಕ ರಿಜ್ವಾನ್‌ ಅರ್ಶದ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.

ಏಕಲವ್ಯ ಪ್ರಶಸ್ತಿ-2022

ಕ್ರೀಡಾಪಟು ಕ್ರೀಡೆ

ಪ್ರಿಯಾ ಮೋಹನ್‌ ಅಥ್ಲೆಟಿಕ್ಸ್‌

ಮಿಥುನ್‌ ಮಂಜುನಾಥ್‌ ಬ್ಯಾಡ್ಮಿಂಟನ್‌

ಪ್ರತ್ಯನುಷ್‌ ತೋಮರ್‌ ಬಾಸ್ಕೆಟ್‌ಬಾಲ್‌

ಸಂಪತ್‌ ಸೈಕ್ಲಿಂಗ್‌

ಮೊಹಮ್ಮದ್‌ ರಾಹೀಲ್ ಹಾಕಿ

ಧನಲಕ್ಷ್ಮಿ ಕಯಾಕಿಂಗ್‌

ಅದಿತಿ ಅಶೋಕ್‌ ಗಾಲ್ಫ್‌

ಪ್ರಜ್ವಲ್ ದೇವ್‌ ಟೆನಿಸ್‌

ಯುಕ್ತಿ ರಾಜೇಂದ್ರ ಶೂಟಿಂಗ್‌

ರಿಧಿಮ ಈಜು

ಮಣಿಕಂಠನ್‌ ಸ್ಪೋರ್ಟ್ಸ್‌ಕ್ಲೈಂಬಿಂಗ್‌

ಮನೋಜ್‌ ವಾಲಿಬಾಲ್‌

ಪ್ರವಲಿಕಾ ಟೇಕ್ವಾಂಡೊ

ನಿಂಗಪ್ಪ ಪ್ರಕಾಶ ಕುಸ್ತಿ

ರಕ್ಷಿತಾ ರಾಜು ಪ್ಯಾರಾ ಅಥ್ಲೆಟಿಕ್ಸ್‌

ಏಕಲವ್ಯ ಪ್ರಶಸ್ತಿ 2023

ಕ್ರೀಡಾಪಟು ಕ್ರೀಡೆ

ನಿಹಾಲ್‌ ಜೋಯೆಲ್‌ ಅಥ್ಲೆಟಿಕ್ಸ್‌

ಸಾಯಿ ಪ್ರತೀಕ್‌ ಬ್ಯಾಡ್ಮಿಂಟನ್‌

ಆರ್‌.ಸಂಜನಾ ಬಾಸ್ಕೆಟ್‌ಬಾಲ್‌

ಅನುಪಮಾ ಸೈಕ್ಲಿಂಗ್‌

ನೈದಿಲೆ ಫೆನ್ಸಿಂಗ್‌

ಉಜ್ವಲ್ ನಾಯ್ದು ಜಿಮ್ನಾಸ್ಟಿಕ್‌

ಆಭರಣ್‌ ಸುದೇವ್ ಹಾಕಿ

ದಾದಾಪೀರ್‌ ಕಯಾಕಿಂಗ್‌

ದಿವ್ಯಾ ಟಿ.ಎಸ್‌. ಶೂಟಿಂಗ್‌

ಅನೀಶ್‌ ಗೌಡ ಈಜು

ಪ್ರಿಯಾಂಕ ಎಸ್‌. ವಾಲಿಬಾಲ್‌

ಐಶ್ವರ್ಯ ಕರಿಗಾರ ಕುಸ್ತಿ

ಉಷಾ ಬಿ.ಎನ್‌. ವೇಟ್‌ಲಿಫ್ಟಿಂಗ್‌

ಶ್ರೀಧರ್‌ ನಾಗಪ್ಪ ಪ್ಯಾರಾ ಈಜು

ಅಮ್ಮು ಮೋಹನ್‌ ಪ್ಯಾರಾ ಬ್ಯಾಡ್ಮಿಂಟನ್‌

ಕ್ರೀಡಾ ರತ್ನ ಪ್ರಶಸ್ತಿ 2022

ಕ್ರೀಡಾಪಟು ಕ್ರೀಡೆ

ಅರುಣ್‌ ನಾಯಕ್‌ ಅಟ್ಯಾ ಪಾಠ್ಯಾ

ದಿವ್ಯ ಎಂ.ಎಸ್‌. ಬಾಲ್‌ ಬ್ಯಾಡ್ಮಿಂಟನ್‌

ಬಾಸ್ಕರ್‌ ದೇವಾಡಿಗ ಕಂಬಳ

ರಾಯಪ್ಪ ಧರೆಪ್ಪ ಸಂಗ್ರಾಣಿ ಕಲ್ಲು

ಚೈತ್ರಾ ಬಿ. ಖೋ ಖೋ

ವಿಠಲ್‌ ಮೇಟಿ ಕಬಡ್ಡಿ

ಶಂಕರಪ್ಪ ಮಲ್ಲಕಂಬ

ಗೋಪವ್ವಾ ಮಂಜುನಾಥ ಕುಸ್ತಿ

ಫಿರೋಜ್‌ ಶೇಖ್‌ ಯೋಗ

ಕ್ರೀಡಾ ರತ್ನ ಪ್ರಶಸ್ತಿ 2023

ಗೌತಮ್‌ ಎಂ.ಕೆ. ಖೋ ಖೋ

ಸುನೀಲ್ ಪಡತಾರೆ ಕುಸ್ತಿ

ವಿನಾಯಕ ಕೊಂಗಿ ಯೋಗ

ಮೇಘನಾ ಬಾಲ್‌ ಬ್ಯಾಡ್ಮಿಂಟನ್‌

ಆತ್ಮೀಯಾ ಕಬಡ್ಡಿ

ಮಂಜುಳ ಹಣಮಂತ ಮಲ್ಲಕಂಬ

ಜೀವಮಾನ ಸಾಧನೆ ಪ್ರಶಸ್ತಿ 2022

ಕ್ರೀಡಾಪಟು ಕ್ರೀಡೆ

ಬಿ.ಎನ್‌.ಸುಧಾಕರ್‌ ಬ್ಯಾಡ್ಮಿಂಟನ್‌

ಆರ್‌.ರಾಜನ್‌ ಬಾಸ್ಕೆಟ್‌ಬಾಲ್‌

ಕೃಷ್ಣ ಫುಟ್ಬಾಲ್‌

ಈಶ್ವರ್‌ ಅಂಗಡಿ ಕಬಡ್ಡಿ

ಉಮೇಶ್‌ ಕಲಘಟಗಿ ಈಜು

ಜೀವಮಾನ ಸಾಧನೆ ಪ್ರಶಸ್ತಿ 2022

ಕ್ರೀಡಾಪಟು ಕ್ರೀಡೆ

ರಾಹುಲ್‌ ಬಿ. ಪ್ಯಾರಾ ಅಥ್ಲೆಟಿಕ್ಸ್‌

ಕೃಷ್ಣಮೂರ್ತಿ ಕಬಡ್ಡಿ

ಸತ್ಯನಾರಾಯಣ ಬಾಸ್ಕೆಟ್‌ಬಾಲ್‌

ಎಚ್‌.ಬಿ.ರವೀಶ್‌ ಹಾಕಿ

ಕ್ರೀಡಾ ಪೋಷಕ ಪ್ರಶಸ್ತಿ 2023

ಶೇಷಾದ್ರಿಪುರಂ ಶಿಕ್ಷಣ ದತ್ತಿ, ಬೆಂಗಳೂರು