ಮಾಗಡಿ: ಬೆಂಗಳೂರಿನ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಸಹಯೋಗದಲ್ಲಿ 2025-2026ನೇ ಸಾಲಿನ ರಾಜ್ಯ ಮಟ್ಟದ ಅಪರ್ಣ ನಿರೂಪಣಾ ರತ್ನ ಪ್ರಶಸ್ತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ಹುಳ್ಳೇನಹಳ್ಳಿ ಗ್ರಾಮದ ಶಿಕ್ಷಕಿ ಎಚ್.ಆರ್.ಧನಲಕ್ಷ್ಮಿ ಭಾಜನರಾಗಿದ್ದಾರೆ ಎಂದು ಎನ್‌ಪಿಎಸ್ ಸಂಘದ ಅಧ್ಯಕ್ಷ ದೇವರಾಜು ಹೇಳಿದರು.

ಶೀಕ್ಷಕಿ ಧನಲಕ್ಷ್ಮೀ ಜಿಲ್ಲಾ ಮತ್ತು ತಾಲೂಕು ಮಟ್ಟದ ಶಿಕ್ಷಕರ ಸಭೆ ಸಮಾರಂಭಗಳಲ್ಲಿ ಅಚ್ಚುಕಟ್ಟಾದ ನಿರೂಪಣೆ ಮಾಡಿ ಸೈ ಎನಿಸಿಕೊಂಡಿದ್ದರು. ಇವರ ನಿರೂಪಣಾ ಕೌಶಲ್ಯ, ಮಾತುಗಾರಿಕೆ ಕೌಶಲ್ಯವನ್ನು ಗುರುತಿಸಿ ಅಪರ್ಣ ನಿರೂಪಣಾ ಪ್ರಶಸ್ತಿ ರತ್ನ ನೀಡಿ ಗೌರವಿಸಿದೆ. ಇತ್ತೀಚೆಗೆ ಸೂರ್ಯ ಫೌಂಡೇಶನ್ ಹಾಗೂ ಸ್ಪಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ್ ನವೋದಯ, ಪ್ರಧಾನ ಸಂಚಾಲಕ ಪಿ.ಮಹೇಶ್, ಬಿ.ಕೆ.ಸತೀಶ್ ಅವರು ಶಿಕ್ಷಕಿ ಎಚ್.ಆರ್.ಧನಲಕ್ಷ್ಮೀ ಅವರಿಗೆ ಅಪರ್ಣಾ ನಿರೂಪಣಾ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘ, ರಾಜ್ಯ ಜಿಪಿಟಿ ಶಿಕ್ಷಕರ ಸಂಘಟನೆಗಳು ಸೇರಿದಂತೆ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಟ್ಟರಾಜು, ಮಾಜಿ ಅಧ್ಯಕ್ಷ ಶಿವರಾಮಯ್ಯ ಶಿವನಸಂದ್ರ, ಎನ್‌ಪಿಎಸ್‌ ಸಂಘಟನೆಯ ಉಪಾಧ್ಯಕ್ಷ ಸತೀಶ್, ರಾಜ್ಯ ಸಂಘದ ಖಜಾಂಚಿ ಎಲ್.ಟಿ.ವಿಜಯ, ಕುದೂರು ಕೆಪಿಎಸ್ ಶಾಲೆಯ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕ ಹನುಮಂತರಾಯಪ್ಪ, ನೌಕರರ ಸಂಘದ ಮಂಡಿ ನರಸಿಂಹಯ್ಯ, ಮಾಜಿ ಅಧ್ಯಕ್ಷ ಮಲ್ಲೂರು ಲೋಕೇಶ್ ಇತರರು ಅಭಿನಂದನೆ ಸಲ್ಲಿಸಿದ್ದಾರೆ.