ಸಾರಾಂಶ
ಇದಕ್ಕೂ ಮುನ್ನ ಬಜರಂಗ್, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗದಿರುವಾಗ ಪದ್ಮಶ್ರೀ ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ)ಗೆ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಆಪ್ತರ ಆಯ್ಕೆ ವಿರೋಧಿಸಿ ಒಲಿಂಪಿಕ್ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದ ಬೆನ್ನಲ್ಲೇ, ಮತ್ತೊಬ್ಬ ಅಗ್ರ ಕುಸ್ತಿಪಟು ಬಜರಂಗ್ ಪೂನಿಯಾ 2019ರಲ್ಲಿ ತಮಗೆ ದೊರೆತಿದ್ದ ಪದ್ಮಶ್ರೀ ಪುರಸ್ಕಾರವನ್ನೇ ಮರಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಶುಕ್ರವಾರ ಪದ್ಮಶ್ರೀ ಹಿಂತಿರುಗಿಸಲು ಮುಂದಾಗಿದ್ದ ಪೂನಿಯಾ ಅವರನ್ನು ದೆಹಲಿಯ ಕರ್ತವ್ಯಪಥದಲ್ಲಿ ಪೊಲೀಸರು ತಡೆದರು. ಇದರಿಂದ ಕ್ರುದ್ಧರಾದ ಪೂನಿಯಾ ಕರ್ತವ್ಯಪಥದ ಫುಟ್‌ಪಾತ್‌ನಲ್ಲಿ ಪದ್ಮಶ್ರೀ ಪದಕ ಇಟ್ಟು ತೆರಳಿದ್ದಾರೆ. ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.
ಇದಕ್ಕೂ ಮುನ್ನ ಬಜರಂಗ್, ಮಹಿಳಾ ಕುಸ್ತಿಪಟುಗಳಿಗೆ ನ್ಯಾಯ ಸಿಗದಿರುವಾಗ ಪದ್ಮಶ್ರೀ ಇಟ್ಟುಕೊಂಡು ನಾನೇನು ಮಾಡಲಿ ಎಂದು ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು.ಮನವೊಲಿಸುತ್ತೇವೆ- ಕ್ರೀಡಾ ಇಲಾಖೆ:ಪದ್ಮಶ್ರೀ ವಾಪಸ್ ನೀಡುವ ಬಜರಂಗ್ ನಿರ್ಧಾರ ಅವರ ವೈಯಕ್ತಿಕ ಎಂದು ಕೇಂದ್ರ ಕ್ರೀಡಾ ಇಲಾಖೆ ಪ್ರತಿಕ್ರಿಯಿಸಿದೆ. ಆದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಬಜರಂಗ್‌ರನ್ನು ಮನವೊಲಿಸುತ್ತೇವೆ. ಕುಸ್ತಿ ಸಂಸ್ಥೆ ಚುನಾವಣೆ ಪಾರದರ್ಶಕವಾಗಿ ನಡೆದಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.--2019ರಲ್ಲಿ ಪದ್ಮಶ್ರೀಪಡೆದಿದ್ದ ಬಜರಂಗ್‌ದೇಶದ 4ನೇ ಅತ್ಯುನ್ನತ ನಾಗರಿಕ ಪುರಸ್ಕಾರವಾಗಿರುವ ಪದ್ಮಶ್ರೀಯನ್ನು ಬಜರಂಗ್ 2019ರಲ್ಲಿ ಅಂದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಸ್ವೀಕರಿಸಿದ್ದರು. ಅವರು ಅರ್ಜುನ, ಖೇಲ್ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ.-
ಪದ್ಮಶ್ರೀ ಇಟ್ಟುಕೊಂಡುನಾನೇನು ಮಾಡಲಿ?
ದೇಶ ಮಹಿಳಾ ಕುಸ್ತಿಪಟುಗಳು ದೌರ್ಜನ್ಯಕ್ಕೆ ಒಳಗಾಗುತ್ತಿರುವಾಗ ಪದ್ಮಶ್ರೀ ಪ್ರಶಸ್ತಿ ವಿಜೇತ ಎಂಬ ಹೆಸರಿನೊಂದಿಗೆ ಬದುಕಲು ನನ್ನಿಂದ ಸಾಧ್ಯವಿಲ್ಲ. ಇದನ್ನು ಇಟ್ಟುಕೊಂಡು ನಾನೇನು ಮಾಡಲಿ? ಕ್ರೀಡೆ ಮಹಿಳೆಯರ ಬದುಕನ್ನೇ ಬದಲಿಸಿದೆ. ಆದರೆ ಸದ್ಯದ ಪರಿಸ್ಥಿತಿ ಮಹಿಳೆಯರು ಕ್ರೀಡೆ ತೊರೆಯುವಂತೆ ಮಾಡುತ್ತಿದೆ.-ಬಜರಂಗ್ ಪೂನಿಯಾ, ಅಗ್ರ ಕುಸ್ತಿಪಟು
;Resize=(128,128))
;Resize=(128,128))
;Resize=(128,128))
;Resize=(128,128))