ಬೆಂಗಳೂರು ಬುಲ್ಸ್‌ನ ಸತತ 2ನೇ ಪಂದ್ಯವೂ ಟೈ

| Published : Feb 01 2024, 02:04 AM IST

ಸಾರಾಂಶ

10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಸತತ 2ನೇ ಪಂದ್ಯದಲ್ಲೂ ಟೈಗೆ ತೃಪ್ತಿಪಟ್ಟುಕೊಂಡಿದೆ. ಬುಧವಾರ 3 ಬಾರಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧದ ಪಂದ್ಯ 29-29 ಅಂಕಗಳಿಂದ ಸಮಬಲಗೊಂಡಿತು.

ಪಾಟ್ನಾ: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ಸತತ 2ನೇ ಪಂದ್ಯದಲ್ಲೂ ಟೈಗೆ ತೃಪ್ತಿಪಟ್ಟುಕೊಂಡಿದೆ. ಬುಧವಾರ 3 ಬಾರಿ ಚಾಂಪಿಯನ್‌ ಪಾಟ್ನಾ ಪೈರೇಟ್ಸ್‌ ವಿರುದ್ಧದ ಪಂದ್ಯ 29-29 ಅಂಕಗಳಿಂದ ಸಮಬಲಗೊಂಡಿತು. ಇದರೊಂದಿಗೆ ಬುಲ್ಸ್‌ 17 ಪಂದ್ಯಗಳಲ್ಲಿ 6 ಜಯ, 9 ಸೋಲು, 2 ಟೈನೊಂದಿಗೆ 43 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅತ್ತ ಪಾಟ್ನಾ 18 ಪಂದ್ಯಗಳಲ್ಲಿ 53 ಅಂಕದೊಂದಿಗೆ 4ನೇ ಸ್ಥಾನಕ್ಕೇರಿದೆ.ಆರಂಭದಿಂದಲೂ ಉತ್ತಮ ಪ್ರದರ್ಶನ ತೋರಿದ ಬುಲ್ಸ್‌ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಮೊದಲಾರ್ಧಕ್ಕೆ ಬುಲ್ಸ್‌ 16-13ರಲ್ಲಿ ಮುನ್ನಡೆ ಪಡೆದಿತ್ತು. ಕೊನೆವರೆಗೂ ಅಂಕಗಳಲ್ಲಿ ಅಂತರ ಕಾಯ್ದುಕೊಂಡು ಮೇಲುಗೈ ಸಾಧಿಸಿದ್ದ ಬುಲ್ಸ್‌ ಕೊನೆಯಲ್ಲಿ ತಪ್ಪುಗಳನ್ನೆಸಗಿತು. ಇದರಿಂದ ಕೊನೆ ಕ್ಷಣದಲ್ಲಿ ಪಾಟ್ನಾ ಮುನ್ನಡೆ ಪಡೆದರೂ, ಪಂದ್ಯ ಕೈ ಜಾರದಂತೆ ನೋಡಿಕೊಂಡ ಬುಲ್ಸ್‌ ಸೇನೆ, ಟೈ ಮಾಡಿಕೊಂಡಿತು. ಬುಲ್ಸ್‌ನ ಸುಶೀಲ್‌ 8, ಅಕ್ಷಿತ್‌ 6 ಅಂಕ ಸಂಪಾದಿಸಿದರೆ, 39ನೇ ನಿಮಿಷದಲ್ಲಿ ಅಂಕಣಕ್ಕೆ ಬಂದ ಭರತ್‌ 2 ರೈಡ್‌ ಮಾಡಿದರೂ ಯಾವುದೇ ಅಂಕ ಗಳಿಸಲಾಗಲಿಲ್ಲ. ಪಾಟ್ನಾ ಪರ ಸಂದೀಪ್‌ ಕುಮಾರ್‌ ಏಕಾಂಗಿ ಹೋರಾಟ ಪ್ರದರ್ಶಿಸಿ 14 ರೈಡ್‌ ಅಂಕ ತಮ್ಮದಾಗಿಸಿಕೊಂಡರು.

-

ಜೈಪುರಕ್ಕೆ ಸೋಲು

ಬುಧವಾರದ ಮತ್ತೊಂದು ಪಂದ್ಯದಲ್ಲಿ ತಮಿಳ್‌ ತಲೈವಾಸ್ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 0000 ಅಂಕಗಳಿಂದ ಸೋಲನುಭವಿಸಿತು. ಇದರ ಹೊರತಾಗಿಯೂ ತಂಡ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ.

-

ನಾಳಿನ ಪಂದ್ಯಗಳು

ಡೆಲ್ಲಿ-ಬೆಂಗಾಲ್‌, ರಾತ್ರಿ 8ಕ್ಕೆ

ಗುಜರಾತ್‌-ಹರ್ಯಾಣ, ರಾತ್ರಿ 9ಕ್ಕೆ