ಸಾರಾಂಶ
ಇಟಲಿಯ ಸ್ಟೆಫಾನೊ ನಪೊಲಿಟಾನೊ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಬೆಂಗಳೂರು: ಇಟಲಿಯ ಸ್ಟೆಫಾನೊ ನಪೊಲಿಟಾನೊ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಯೊಂಗ್‌ಚಾನ್ ಹೊಂಗ್ ವಿರುದ್ಧ 4-6, 6-3, 6-3 ಸೆಟ್‌ಗಳಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರು. ಸ್ಟೆಫಾನೊಗೆ 18230 ಅಮೆರಿಕನ್ ಡಾಲರ್ (ಅಂದಾಜು 15 ಲಕ್ಷ ರು.) ನಗದು ಬಹುಮಾನ ದೊರೆಯಿತು. ಜೊತೆಗೆ 100 ಎಟಿಪಿ ರ್‍ಯಾಂಕಿಂಗ್ ಅಂಕ ಸಹ ಕಲೆಹಾಕಿದರು.