ಚೊಚ್ಚಲ ಇಂಡಿಯನ್ ಪಿಕಲ್‌ಬಾಲ್ ಲೀಗ್‌ಗೆ ಬೆಂಗಳೂರು ತಂಡ ಸೇರ್ಪಡೆ

| Published : Nov 20 2025, 12:00 AM IST

ಚೊಚ್ಚಲ ಇಂಡಿಯನ್ ಪಿಕಲ್‌ಬಾಲ್ ಲೀಗ್‌ಗೆ ಬೆಂಗಳೂರು ತಂಡ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ತಂಡವು 2025ರ ಡಿಸೆಂಬರ್ 1 ರಿಂದ 7 ರವರೆಗೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ಗುರುಗ್ರಾಮ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ತಂಡಗಳೊಂದಿಗೆ ಸೆಣಸಾಡಲಿವೆ.

ಬೆಂಗಳೂರು: ಇಂಡಿಯನ್ ಪಿಕಲ್‌ಬಾಲ್ ಲೀಗ್ (ಐಪಿಬಿಎಲ್) ಉದ್ಘಾಟನಾ ತಂಡಕ್ಕೆ ಬೆಂಗಳೂರು ತಂಡ ಸೇರಲು ಸಜ್ಜಾಗಿದೆ. ದಿ ಟೈಮ್ಸ್ ಗ್ರೂಪ್ ಪ್ರಾರಂಭಿಸಿದ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಿಂದ (ಎಂವೈಎಎಸ್) ಮಾನ್ಯತೆ ಪಡೆದ ಇಂಡಿಯನ್ ಪಿಕಲ್‌ಬಾಲ್ ಅಸೋಸಿಯೇಷನ್(ಐಪಿಎ)ನಿಂದ ಮಂಜೂರಾತಿ ಪಡೆದ ಐಪಿಬಿಎಲ್ ಭಾರತದ ಅತ್ಯಂತ ಕ್ರಿಯಾತ್ಮಕ ಕ್ರೀಡಾ ನಗರಗಳಲ್ಲಿ ಒಂದಾದ ಬೆಂಗಳೂರನ್ನು ಲೀಗ್‌ಗೆ ಸೇರಿಸುತ್ತಿದೆ. ಈ ಫ್ರ್ಯಾಂಚೈಸಿಯು ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸಲಿದೆ.ಬೆಂಗಳೂರು ತಂಡವು 2025ರ ಡಿಸೆಂಬರ್ 1 ರಿಂದ 7 ರವರೆಗೆ ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದ ಕೆಡಿ ಜಾಧವ್ ಒಳಾಂಗಣ ಸಭಾಂಗಣದಲ್ಲಿ ಗುರುಗ್ರಾಮ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈ ತಂಡಗಳೊಂದಿಗೆ ಸೆಣಸಾಡಲಿವೆ.

ಫ್ರಾಂಚೈಸಿಗಳನ್ನು ಸ್ವಾಗತಿಸಿದ ಟೈಮ್ಸ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, ‘ಈ ತಂಡಗಳು ಇಂಡಿಯನ್ ಪಿಕಲ್‌ಬಾಲ್ ಲೀಗ್ ಅನ್ನು ವ್ಯಾಖ್ಯಾನಿಸುವ ಪ್ರಮಾಣ, ಮಹತ್ವಾಕಾಂಕ್ಷೆ ಮತ್ತು ರಾಷ್ಟ್ರೀಯ ವ್ಯಾಪ್ತಿಯನ್ನು ಪ್ರತಿನಿಧಿಸುತ್ತವೆ. ಭಾರತದ ಅತ್ಯಂತ ಸಕ್ರಿಯ ಪ್ರೇಕ್ಷಕರಲ್ಲಿ ಒಂದಾದ ಬೆಂಗಳೂರು, ಐಪಿಬಿಎಲ್‌ಗೆ ಚಲನಶೀಲತೆ, ವಿಶ್ವಾಸಾರ್ಹತೆ ಮತ್ತು ಸ್ಪರ್ಧಾತ್ಮಕ ಶಕ್ತಿಯನ್ನು ಸೇರಿಸುತ್ತದೆ. ಇದು ಆಧುನಿಕ, ನಗರ ಕ್ರೀಡಾ ಸಂಸ್ಕೃತಿಯೊಂದಿಗೆ ಲೀಗ್ ಸಂಪರ್ಕವನ್ನು ಬಲಪಡಿಸುತ್ತದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರು ಬ್ಲಾಸ್ಟರ್ಸ್ ಸಿಇಒ ವಸಂತ್ ಕಲ್ಯಾಣ್, "ಬೆಂಗಳೂರು ನವ ಭಾರತದ ನಾಡಿಮಿಡಿತ, ತ್ವರಿತ, ಅಭಿವ್ಯಕ್ತಿಶೀಲ ಮತ್ತು ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ. ಪಿಕಲ್ ಬಾಲ್ ಈ ನಗರಕ್ಕೆ ಟೈಲರ್ ಮೇಡ್ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.