ಟೆನಿಸ್‌ ದಿಗ್ಗಜೆ ವೀನಸ್‌ ವಿಲಿಯಮ್ಸ್‌ ರೀತಿ ಬೊಂಬೆಗಳನ್ನು ತಯಾರಿಸಲಿದೆ ಬಾರ್ಬಿ!

| Published : May 23 2024, 01:03 AM IST / Updated: May 23 2024, 04:18 AM IST

ಟೆನಿಸ್‌ ದಿಗ್ಗಜೆ ವೀನಸ್‌ ವಿಲಿಯಮ್ಸ್‌ ರೀತಿ ಬೊಂಬೆಗಳನ್ನು ತಯಾರಿಸಲಿದೆ ಬಾರ್ಬಿ!
Share this Article
  • FB
  • TW
  • Linkdin
  • Email

ಸಾರಾಂಶ

ಟೆನಿಸ್‌ ದಿಗ್ಗಜೆ ವೀನಸ್‌ ವಿಲಿಯಮ್ಸ್‌ರನ್ನು ಹೋಲುವ ಗೊಂಬೆಗಳನ್ನು ಮಾರುಕಟ್ಟೆಗೆ ತರಲಿದೆ ಬಾರ್ಬಿ. 7 ಬಾರಿ ಗ್ರ್ಯಾನ್‌ ಸ್ಲಾಂ ಸಿಂಗಲ್ಸ್‌ ಪ್ರಶಸ್ತಿ ವಿಜೇತೆಗೆ ಅಮೆರಿಕದ ಮ್ಯಾಟಲ್‌ ಸಂಸ್ಥೆಯಿಂದ ವಿಶೇಷ ಗೌರವ.

ಎಲ್‌ ಸೆಗುಂಡೊ(ಕ್ಯಾಲಿಫೋರ್ನಿಯಾ): ಅಮೆರಿಕದ ದಿಗ್ಗಜ ಟೆನಿಸ್‌ ಆಟಗಾರ್ತಿ ವೀನಸ್‌ ವಿಲಿಯಮ್ಸ್‌ ಸೇರಿ ಒಟ್ಟು 8 ಕ್ರೀಡಾ ತಾರೆಯರನ್ನು ಹೋಲುವ ಬೊಂಬೆಗಳನ್ನು ತಯಾರಿಸಿ, ಅವರನ್ನು ಗೌರವಿಸಲು ವಿಶ್ವ ವಿಖ್ಯಾತ ಗೊಂಬೆ ತಯಾರಕ ಸಂಸ್ಥೆ ಮ್ಯಾಟಲ್‌ ತಿಳಿಸಿದೆ. 

ಈ ಸಂಸ್ಥೆಯ ಬಾರ್ಬಿ ಗೊಂಬೆಗಳು ಜಗತ್ಪ್ರಸಿದ್ಧಿ ಪಡೆದಿದ್ದು, ವೀನಸ್‌ ಸೇರಿ 8 ಕ್ರೀಡಾ ತಾರೆಯರ ಗೊಂಬೆಗಳನ್ನೂ ಬಾರ್ಬಿ ಗೊಂಬೆಗಳಂತೆಯೇ ರೂಪಿಸುವುದಾಗಿ ಸಂಸ್ಥೆ ತಿಳಿಸಿದೆ. 

ಈಗಾಗಲೇ ವೀನಸ್‌ರ ಗೊಂಬೆ ಹೇಗಿರಲಿದೆ ಎನ್ನುವ ಫೋಟೋ ಬಿಡುಗಡೆಗೊಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ವೀನಸ್‌ ಸಿಂಗಲ್ಸ್‌ ವಿಭಾಗದಲ್ಲಿ 7 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಜಯಿಸಿದ್ದಾರೆ. ಈ ಗೊಂಬೆಗಳನ್ನು ವೀನಸ್‌ರ ಅಭಿಮಾನಿಗಳು ಸದ್ಯದಲ್ಲೇ ಖರೀದಿಸಬಹುದಾಗಿದೆ.