ಟಿ20 ವಿಶ್ವಕಪ್‌: ರೋಹಿತ್‌, ಕೊಹ್ಲಿಗೆ ಮಣೆ ಹಾಕಿದ ಬಿಸಿಸಿಐ!

| Published : May 01 2024, 01:17 AM IST

ಟಿ20 ವಿಶ್ವಕಪ್‌: ರೋಹಿತ್‌, ಕೊಹ್ಲಿಗೆ ಮಣೆ ಹಾಕಿದ ಬಿಸಿಸಿಐ!
Share this Article
  • FB
  • TW
  • Linkdin
  • Email

ಸಾರಾಂಶ

ಟಿ20 ವಿಶ್ವಕಪ್‌ಗೆ ಆಯ್ಕೆಯಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ. 2022ರ ವಿಶ್ವಕಪ್‌ ಬಳಿಕ ಟಿ20 ಕ್ರಿಕೆಟ್‌ನಿಂದ ದೂರ ಉಳಿದಿದ್ದ ಹಿರಿಯ ಆಟಗಾರರು. ಅನುಭವಿಗಳನ್ನು ಕೈಬಿಡುವ ಧೈರ್ಯ ಮಾಡದ ಬಿಸಿಸಿಐ.

ಅಹಮದಾಬಾದ್‌: 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಸೋಲುಂಡ ಬಳಿಕ ಭಾರತ 12 ತಿಂಗಳ ಕಾಲ ಹೊಸ ಪೀಳಿಗೆಯ ತಂಡವನ್ನು ಕಟ್ಟುವ ಪ್ರಾಮಾಣಿಕ ಪ್ರಯತ್ನ ನಡೆಸಿತು.

ಹಿರಿಯ ಆಟಗಾರರನ್ನು ಟಿ20 ಕ್ರಿಕೆಟ್‌ನಿಂದ ದೂರವಿರಿಸಿ, ಯುವ ಆಟಗಾರರನ್ನು ತಂಡದೊಳಕ್ಕೆ ತರಲಾಯಿತು. ಆದರೆ ಈ ವರ್ಷ ಜನವರಿಯಲ್ಲಿ ಬಿಸಿಸಿಐ ತನ್ನ ಯೋಜನೆಯಿಂದ ಯೂ-ಟರ್ನ್‌ ಮಾಡಿ, ವಿಶ್ವಕಪ್‌ಗೂ ಮುನ್ನ ಭಾರತ ಆಡಿದ ಕೊನೆಯ ಟಿ20 ಸರಣಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯನ್ನು ಆಡಿಸಿತು.

ಇದರೊಂದಿಗೆ ಈ ಇಬ್ಬರು ಹಿರಿಯ ಆಟಗಾರರನ್ನು ವಿಶ್ವಕಪ್‌ಗೆ ಆಯ್ಕೆ ಮಾಡುವ ಬಗ್ಗೆ ತನ್ನ ನಿಲುವನ್ನು ಬಿಸಿಸಿಐ ಸ್ಪಷ್ಟಪಡಿಸಿತ್ತು.ಟಿ20 ವಿಶ್ವಕಪ್‌ಗಾಗಿ ಗುರುತಿಸಲ್ಪಟ್ಟಿದ್ದ ಇಶಾನ್‌ ಕಿಶನ್‌, ತಿಲಕ್‌ ವರ್ಮಾ, ಋತುರಾಜ್‌ ಗಾಯಕ್ವಾಡ್‌, ರಿಂಕು ಸಿಂಗ್‌, ಜಿತೇಶ್‌ ಶರ್ಮಾ, ರವಿ ಬಿಷ್ಣೋಯ್‌ಗೆ ಅವಕಾಶ ಸಿಕ್ಕಿಲ್ಲ.