ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ: ನಿಬಂಧನೆಗಳೇನು ಗೊತ್ತಾ?

| Published : May 14 2024, 01:07 AM IST / Updated: May 14 2024, 04:17 AM IST

ಟೀಂ ಇಂಡಿಯಾದ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನ: ನಿಬಂಧನೆಗಳೇನು ಗೊತ್ತಾ?
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ಕೋಚ್‌ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ.

ಮುಂಬೈ: ಭಾರತ ಪುರುಷರ ಕ್ರಿಕೆಟ್ ತಂಡದ ಕೋಚ್‌ ಹುದ್ದೆಗೆ ಬಿಸಿಸಿಐ ಸೋಮವಾರ ಅರ್ಜಿ ಆಹ್ವಾನಿಸಿದೆ. ನೂತನ ಕೋಚ್‌ ಅವಧಿ 3.5 ವರ್ಷ ಆಗಿರಲಿದ್ದು, 2024ರ ಜುಲೈ1ರಿಂದ ಆರಂಭಗೊಂಡು 2027ರ ಡಿ.31ರ ವರೆಗೆ ಇರಲಿದೆ ಎಂದು ಬಿಸಿಸಿಐ ತಿಳಿಸಿದೆ. ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 30 ಟೆಸ್ಟ್ ಅಥವಾ 50 ಏಕದಿನ ಪಂದ್ಯಗಳನ್ನಾಡಿರಬೇಕು. 

ಐಸಿಸಿ ಸದಸ್ಯ(ಟೆಸ್ಟ್‌ ಆಡುವ) ದೇಶದ ತಂಡಕ್ಕೆ ಕನಿಷ್ಠ 2 ವರ್ಷ ಅಥವಾ ಐಪಿಎಲ್‌, ಅಂತಾರಾಷ್ಟ್ರೀಯ ಮಟ್ಟದ ಲೀಗ್‌, ಪ್ರಥಮ ದರ್ಜೆ ತಂಡ ಅಥವಾ ರಾಷ್ಟ್ರೀಯ ‘ಎ’ ತಂಡಕ್ಕೆ ಕನಿಷ್ಠ 3 ವರ್ಷ ಕೋಚ್‌ ಆಗಿ ಸೇವೆ ಸಲ್ಲಿಸಿರಬೇಕು. ಬಿಸಿಸಿಐ ಲೆವೆಲ್‌ 3 ಅಥವಾ ಅದಕ್ಕೆ ಸಮನಾದ ಪ್ರಮಾಣಪತ್ರ ಹೊಂದಿರಬೇಕು ಮತ್ತು 60 ವರ್ಷ ಮೀರಿರಬಾರದು ಎಂದು ಬಿಸಿಸಿಐ ನಿಬಂಧನೆ ವಿಧಿಸಿದೆ.

ಭಾರತದ ಟಿ20 ಜೆರ್ಸಿ ಅಧಿಕೃತ ಅನಾವರಣ

ಅಹಮದಾಬಾದ್‌: ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದ ನೂತನ ಟಿ20 ಜೆರ್ಸಿಯನ್ನು ಸೋಮವಾರದ ಅಹಮದಾಬಾದ್‌ನ ಮೋದಿ ಕ್ರೀಡಾಂಗಣದಲ್ಲಿ ಅನಾವರಣಗೊಳಿಸಲಾಗಿದೆ. ಭಾರತದ ಜೆರ್ಸಿ ಪ್ರಾಯೋಜಕತ್ವ ಹೊಂದಿರುವ ಆ್ಯಡಿಡಾಸ್‌ ಸಂಸ್ಥೆ ಇತ್ತೀಚೆಗಷ್ಟೇ ಜೆರ್ಸಿಯ ಚಿತ್ರಗಳನ್ನು ಬಿಡುಗಡೆಗೊಳಿಸಿತ್ತು. ಸೋಮವಾರ ನಾಯಕ ರೋಹಿತ್‌ ಶರ್ಮಾ, ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಅಧಿಕೃತವಾಗಿ ಅನಾವರಣಗೊಳಿಸಿದರು. ಇದರ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.