ದುಲೀಪ್‌ ಟ್ರೋಫಿಯಲ್ಲಿ ಆಡಲು ಸ್ಟಾರ್‌ಗಳಿಗೆ ಜಯ್‌ ಶಾ ಸೂಚನೆ!

| Published : Jul 17 2024, 12:49 AM IST

ದುಲೀಪ್‌ ಟ್ರೋಫಿಯಲ್ಲಿ ಆಡಲು ಸ್ಟಾರ್‌ಗಳಿಗೆ ಜಯ್‌ ಶಾ ಸೂಚನೆ!
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ಕ್ರಿಕೆಟಿಗರಿಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಖಡಕ್‌ ಎಚ್ಚರಿಕೆ. ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆಡಲು ಬಯಸುವವರು ಕಡ್ಡಾಯವಾಗಿ ದುಲೀಪ್‌ ಟ್ರೋಫಿಯಲ್ಲಿ ಆಡುವಂತೆ ಸೂಚನೆ.

ನವದೆಹಲಿ: ದೇಸಿ ಕ್ರಿಕೆಟ್‌ಗೆ ಹೆಚ್ಚಿನ ಮಹತ್ವ ನೀಡದಿದ್ದರೆ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ಭಾರತೀಯ ಆಟಗಾರರನ್ನು ಕೆಲ ತಿಂಗಳುಗಳ ಹಿಂದೆ ಎಚ್ಚರಿಸಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌, ಇದೀಗ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿಗೆ ಆಯ್ಕೆಯಾಗಲು ಬಯಸುವ ಆಟಗಾರರು ದುಲೀಪ್‌ ಟ್ರೋಫಿಯಲ್ಲಿ ಆಡಬೇಕು ಎಂದು ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸೆ.5ರಿಂದ ಸೆ.22ರ ವರೆಗೂ ದುಲೀಪ್‌ ಟ್ರೋಫಿ ನಡೆಯಲಿದ್ದು, ಈ ಟೂರ್ನಿಗೂ ರಾಷ್ಟ್ರೀಯ ಆಯ್ಕೆಗಾರರೇ ತಂಡಗಳನ್ನು ಆಯ್ಕೆ ಮಾಡಲಿದ್ದಾರೆ. ಸೆ.19ರಿಂದ ಬಾಂಗ್ಲಾ ವಿರುದ್ಧದ ಟೆಸ್ಟ್‌ ಸರಣಿ ಆರಂಭಗೊಳ್ಳಲಿದೆ.ವಯೋ ವಂಚನೆ ಒಪ್ಪಿಕೊಂಡ ಮಾಜಿ ಕ್ರಿಕೆಟಿಗ ಅಮಿತ್‌ ಮಿಶ್ರಾ!ನವದೆಹಲಿ: ಭಾರತದ ಮಾಜಿ ಲೆಗ್‌ ಸ್ಪಿನ್ನರ್‌ ಅಮಿತ್‌ ಮಿಶ್ರಾ ತಾವು ವಯೋ ವಂಚನೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಪಾಡ್‌ಕಾಸ್ಟ್‌ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು ತಮ್ಮ ಕೋಚ್‌ರ ಒತ್ತಡದಿಂದಾಗಿ ತಮ್ಮ ವಯಸ್ಸನ್ನು ಒಂದು ವರ್ಷ ಕಡಿಮೆ ಕಡಿಮೆ ದಾಖಲಿಸಿದ್ದಾಗಿ ಹೇಳಿಕೊಂಡಿದ್ದಾರೆ. ಸಂದರ್ಶನದ ವೇಳೆ ಈ ಹಿಂದೆ ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ, ಮಿಶ್ರಾರನ್ನು ಅವರ ವಯಸ್ಸಿನ ವಿಚಾರಕ್ಕೆ ಕಾಲೆಳೆದಿದ್ದರ ಬಗ್ಗೆ ಸಂದರ್ಶನಕಾರ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ, ‘ನಾನು ಒಂದು ವರ್ಷ ಕಡಿಮೆ ದಾಖಲಿಸಿದ್ದೇನೆ. ನನ್ನ ಕೋಚ್‌ನ ಒತ್ತಡದಿಂದಾಗಿ ಹೀಗೆ ಮಾಡಬೇಕಾಯಿತು. ನಾನು ಭಾರತ ತಂಡಕ್ಕೆ ಕಾಲಿಟ್ಟಾಗ ನನಗೆ 21 ವರ್ಷ ವಯಸ್ಸು ಎಂದು ತಿಳಿಸಲಾಗಿತ್ತು. ಆದರೆ ನಿಜವಾಗಿಯೂ ಆಗ ನನಗೆ 22 ವರ್ಷವಾಗಿತ್ತು’ ಎಂದಿದ್ದಾರೆ.