ಸಾರಾಂಶ
ಯುಪಿ ವಿರುದ್ಧ 36-57 ಅಂಕಗಳಿಂದ ಹೀನಾಯ ಸೋಲು. ಬೆಂಗಳೂರು ಬುಲ್ಸ್ ನಾಯಕ ಪ್ರದೀಪ್ ನರ್ವಾಲ್(16 ಅಂಕ) ಏಕಾಂಗಿ ಹೋರಾಟ ವ್ಯರ್ಥ.
ಹೈದರಾಬಾದ್: ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 11ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಹ್ಯಾಟ್ರಿಕ್ ಸೋಲಿನ ಮುಖಭಂಗಕ್ಕೊಳಗಾಗಿದೆ. ಮಂಗಳವಾರ ಯುಪಿ ಯೋಧಾಸ್ ವಿರುದ್ಧ ಬುಲ್ಸ್ 36-57 ಅಂಕಗಳಿಂದ ಹೀನಾಯವಾಗಿ ಸೋಲನುಭವಿಸಿತು. ಯೋಧಾಸ್‌ಗೆ ಇದು ಸತತ 2ನೇ ಜಯ.ಆರಂಭದಲ್ಲೇ ಬುಲ್ಸ್ ಮೇಲೆ ಹಿಡಿತ ಸಾಧಿಸಿದ್ದ ಯೋಧಾಸ್, ಮೊದಲಾರ್ಧದಲ್ಲಿ 33-15ರಲ್ಲಿ ಮುನ್ನಡೆಯಲ್ಲಿತ್ತು. ಆ ಬಳಿಕವೂ ಬುಲ್ಸ್‌ಗೆ ಚೇತರಿಸಿಕೊಳ್ಳಲು ಅವಕಾಶ ನೀಡದ ಯೋಧಾಸ್ 21 ಅಂಕಗಳ ಅಂತರದಲ್ಲಿ ಗೆಲುವು ತನ್ನದಾಗಿಸಿಕೊಂಡಿತು. ಬುಲ್ಸ್ 3 ಬಾರಿ ಆಲೌಟಾಯಿತು. ಸುರೇಂದರ್ ಗಿಲ್ 17, ಬುಲ್ಸ್ ಮಾಜಿ ಆಟಗಾರ ಭರತ್ 14 ಅಂಕ ಗಳಿಸಿ ಯೋಧಾಸ್ ಗೆಲುವಿನ ರೂವಾರಿಗಳಾದರು. ಬುಲ್ಸ್‌ನ ಪ್ರದೀಪ್ ನರ್ವಾಲ್(16 ಅಂಕ) ಏಕಾಂಗಿ ಹೋರಾಟ ವ್ಯರ್ಥವಾಯಿತು.ಮಂಗಳವಾರ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 52-22 ಅಂಕಗಳ ಭರ್ಜರಿ ಗೆಲುವು ಸಾಧಿಸಿತು. ಜೈಪುರದ ಅರ್ಜುನ್ ದೇಸ್ವಾಲ್ 19 ಅಂಕ ಗಳಿಸಿದರು.ಇಂದಿನ ಪಂದ್ಯಗಳು
ಪುಣೇರಿ ಪಲ್ಟನ್-ತಲೈವಾಸ್, ರಾತ್ರಿ 8ಕ್ಕೆಗುಜರಾತ್-ಯು ಮುಂಬಾ, ರಾತ್ರಿ 9ಕ್ಕೆಹಂಡ್ರೆಡ್ ಲೀಗ್‌ನ ತಂಡ ಖರೀದಿಗೆ ಐಪಿಎಲ್‌ನ 5 ಫ್ರಾಂಚೈಸಿಗಳಿಂದ ಬಿಡ್ನವದೆಹಲಿ: ಇಂಗ್ಲೆಂಡ್ ದಿ ಹಂಡ್ರೆಡ್ ಕ್ರಿಕೆಟ್ ಲೀಗ್‌ನ ತಂಡಗಳನ್ನು ಖರೀದಿಸಲು ಐಪಿಎಲ್‌ನ 5 ಫ್ರಾಂಚೈಸಿಗಳು ಬಿಡ್ ಸಲ್ಲಿಸಿವೆ ಎಂದು ವರದಿಯಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಲೀಗ್‌ನ 8 ಫ್ರಾಂಚೈಸಿಗಳ ತಲಾ ಶೇ.49 ಪಾಲು ಖರೀದಿಗೆ ಬಿಡ್ ಆಹ್ವಾನಿಸಿತ್ತು. ಪಾಲು ಖರೀದಿಗೆ ಮುಂಬೈ ಇಂಡಿಯನ್ಸ್, ಕೆಕೆಆರ್, ಸನ್‌ರೈಸರ್ಸ್, ರಾಜಸ್ಥಾನ ಹಾಗೂ ಲಖನೌ ಫ್ರಾಂಚೈಸಿಗಳು ಬಿಡ್ ಸಲ್ಲಿಸಿವೆ ಎಂದು ತಿಳಿದುಬಂದಿದೆ.