ಸಾರಾಂಶ
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಫುಟ್ಬಾಲ್ ತಂಡ 2024-25ರ ಋತುವಿಗೆ ಸಜ್ಜುಗೊಂಡಿದ್ದು, 6 ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ.
ಭಾನುವಾರ ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಬಿಎಫ್‌ಸಿ ತಂಡ ಋತುವಿನ ಮೊದಲ ಶಿಬಿರ ನಡೆಸಿತು. ರಾಹುಲ್ ಬೆಕೆ, ಮೊಹಮದ್ ಸಲಾಹ್, ಲಾಲ್ತುವಮ್ಮಾವಿಯಾ ರಾಲ್ಟೆ, ಸ್ಪೇನ್‌ನ ಎಡ್ಗರ್ ಮೆಂಡೆಜ್, ಆಲ್ಬರ್ಟೊ ನೊಗುವೆರಾ, ಅರ್ಜೆಂಟೀನಾದ ಜೊರ್ಗೆ ಡಯಾಕ್ ಕೂಡಾ ತಂಡಕ್ಕೆ ಸೇರ್ಪಡೆಗೊಂಡರು.
ಭಾನುವಾರದ ಶಿಬಿರದಲ್ಲಿ ನಾಯಕ ಸುನಿಲ್ ಚೆಟ್ರಿ, ಗೋಲ್‌ಕೀಪರ್ ಗುರ್‌ಪ್ರೀತ್ ಸಂಧು ಪಾಲ್ಗೊಂಡರು. ಮುಂದಿನ ತಿಂಗಳು ಡುರಾಂಡ್ ಕಪ್ ಆಡುವ ಮೂಲಕ ಬಿಎಫ್‌ಸಿ ಈ ಋತುವಿನಲ್ಲಿ ಅಭಿಯಾನ ಆರಂಭಿಸಲಿದೆ.ಭಾನುವಾರ ನಡೆದ ಶಿಬಿರದಲ್ಲಿ ಬಿಎಫ್‌ಸಿ ಕಿರಿಯರ ತಂಡದ ಕಿಟ್ ಕೂಡಾ ಬಿಡುಗಡೆ ಮಾಡಲಾಯಿತು. ಬಳಿಕ ಆಟಗಾರರು ಕೆಲ ಕಾಲ ಅಭ್ಯಾಸದಲ್ಲಿ ತೊಡಗಿಸಿಕೊಂಡರು.
ಹೊಸ ಆಟಗಾರರು ಮೈದಾನಕ್ಕೆ ತೆರೆದ ವಾಹನದಲ್ಲಿ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು.ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ್ದ ಸುನಿಲ್ ಚೆಟ್ರಿಯನ್ನು ಕಂಡು ಅಪಾರ ಪ್ರಮಾಣದ ಅಭಿಮಾನಿಗಳು ಕುಣಿದಾಡಿದರು.