ಫಿಬಾ ಶಿಸ್ತು ಸಮಿತಿಯಲ್ಲಿ ಬೆಂಗ್ಳೂರು ಆಯುಕ್ತ ದಯಾನಂದ್‌ಗೆ ಸ್ಥಾನ

| Published : May 15 2024, 01:31 AM IST / Updated: May 16 2024, 04:54 AM IST

ಫಿಬಾ ಶಿಸ್ತು ಸಮಿತಿಯಲ್ಲಿ ಬೆಂಗ್ಳೂರು ಆಯುಕ್ತ ದಯಾನಂದ್‌ಗೆ ಸ್ಥಾನ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನ ಪೊಲೀಸ್‌ ಕಮಿಷನರ್‌ ಈಗ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಒಕ್ಕೂಟದ ಶಿಸ್ತು ಸಮಿತಿ ಸದಸ್ಯ. ಕರ್ನಾಟಕ ಬಾಸ್ಕೆಟ್‌ಬಾಲ್‌ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಹಿರಿಯ ಐಪಿಎಲ್‌ ಅಧಿಕಾರಿ ಬಿ.ದಯಾನಂದ್‌.

  ಬೆಂಗಳೂರು :  2023-27ರವರೆಗಿನ ಅವಧಿಗೆ ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಫೆಡರೇಷನ್ (FIBA)ನ ಶಿಸ್ತುಸಮಿತಿಯ ಸದಸ್ಯರ ಪಟ್ಟಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಹಿರಿಯ ಪೊಲೀಸ್ ಅಧಿಕಾರಿ ಬಿ. ದಯಾನಂದ್ ಸ್ಥಾನ ಪಡೆದಿದ್ದಾರೆ.

 ಕರ್ನಾಟಕ ಬಾಸ್ಕೆಟ್‌ಬಾಲ್ ಅಸೋಸಿಯೇಶನ್‌ನ ಅಧ್ಯಕ್ಷರೂ ಆಗಿರುವ ದಯಾನಂದ್, ಮುಂದಿನ ನಾಲ್ಕು ವರ್ಷಗಳ ಅವಧಿಗೆ FIBAದ ಶಿಸ್ತು‌ ಸಮಿತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. 

ಶಿಸ್ತು ಸಮಿತಿಯ ಏಳು ಜನ ಸದಸ್ಯರ ಪೈಕಿ ದಯಾನಂದ್ ಅವರು ಏಕೈಕ ಭಾರತೀಯರಾಗಿದ್ದು, ಜೊತೆಗೆ ಬಲ್ಗೇರಿಯಾದ ಎಲಿಯೊನೋರಾ ರಂಗೆಲೋವಾ, ಸ್ಲೋವಾಕಿಯಾದ ಲುಬೋಮಿರ್ ಕೊಟ್ಲೆಬಾ, ಸ್ವಿಜರ್‌ಲೆಂಡ್‌ನ ಒಲಿವರ್ ಡಕ್ರೆ, ರಾಬರ್ಟ್ ಫಾಕ್ಸ್, ನ್ಯೂಜಿಲೆಂಡ್‌ನ ಕ್ರಿಸ್ ಪ್ಯಾಟರ್ಸನ್, ಸ್ಪೇನ್‌ನ ಬೆಲೆನ್ ಕೊಸೆರೋ ಸಹ ಇದ್ದಾರೆ.