ಸಾರಾಂಶ
ಬೆಂಗಳೂರು ಟಾರ್ಪೆಡೊಸ್ ಪರ ಕರ್ನಾಟಕದ ನೆಚ್ಚಿನ ಆಟಗಾರ ಸೃಜನ್ ಶೆಟ್ಟಿ ಅಮೋಘ ಆಟ ಪ್ರದರ್ಶಿಸಿದರು. ಸೇತು ಅವರ ಆಕ್ರಮಣಕಾರಿ ಸರ್ವ್‌ಗಳು ಗಮನ ಸೆಳೆದವು.
ಚೆನ್ನೈ: ಚೆನ್ನೈನ ಜವಾಹರ್‌ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರುಪೆ ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಬೆಂಗಳೂರು ಟಾರ್ಪೆಡೊಸ್ ತಂಡ ಹೈದರಾಬಾದ್ ಬ್ಲಾಕ್ ಹಾಕ್ಸ್ ವಿರುದ್ಧ ಗೆಲುವು ಸಾಧಿಸಿದೆ.ಹೈದರಾಬಾದ್ ಬ್ಲಾಕ್ ಹಾಕ್ಸ್ ತಂಡವನ್ನು 15-6, 15-11, 15-12ರ ಅಂತರದಲ್ಲಿ ಬೆಂಗಳೂರು ಟಾರ್ಪೆಡೊಸ್ ನೇರ ಸೆಟ್ ಗಳಿಂದ ಮಣಿಸಿತು. ಬೆಂಗಳೂರು ಆಟಗಾರರು ಎಲ್ಲಾ ಹಂತಗಳ್ಲೂ ಮೇಲುಗೈ ಸಾಧಿಸಿ ಎದುರಾಳಿ ತಂಡವನ್ನು ಸುಲಭವಾಗಿ ಸೋಲಿಸಿದರು.ಬೆಂಗಳೂರು ಟಾರ್ಪೆಡೊಸ್ ಥಾಮಸ್ ಹೆಪ್ಟಿನ್ ಸ್ಟಾಲ್, ಕರ್ನಾಟಕದ ನೆಚ್ಚಿನ ಆಟಗಾರ ಸೃಜನ್ ಶೆಟ್ಟಿ ಅಮೋಘ ಆಟ ಪ್ರದರ್ಶಿಸಿದರು. ನಾಯಕ ಪಂಕಜ್ ಶರ್ಮಾ ತಮ್ಮ ತಂಡದ ಆಟಗಾರರೊಂದಿಗೆ ತರಬೇತುದಾರ ಡೇವಿಡ್ ಲೀ ಅವರ ತಂತ್ರಗಳನ್ನು ಅತ್ಯಂತ ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದರು. ಸೇತು ಅವರ ಆಕ್ರಮಣಕಾರಿ ಸರ್ವ್‌ಗಳು ಗಮನ ಸೆಳೆದವು.