ಪ್ರೈಮ್ ವಾಲಿಬಾಲ್ ಲೀಗ್ : ಮುಂಬೈ ವಿರುದ್ಧ ಸೋತ ಬೆಂಗಳೂರು ಟಾರ್ಪಿಡೋಸ್‌

| Published : Feb 22 2024, 01:45 AM IST

ಪ್ರೈಮ್ ವಾಲಿಬಾಲ್ ಲೀಗ್ : ಮುಂಬೈ ವಿರುದ್ಧ ಸೋತ ಬೆಂಗಳೂರು ಟಾರ್ಪಿಡೋಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಪ್ರೈಮ್‌ ವಾಲಿಬಾಲ್‌ ಲೀಗ್‌ನ 2ನೇ ಆವೃತ್ತಿಯಲ್ಲಿ ಸತತ 2ನೇ ಸೋಲು ಅನುಭವಿಸಿದ ಬೆಂಗಳೂರು ಟಾರ್ಪೆಡೋಸ್‌ ತಂಡ. ತನ್ನ 2ನೇ ಪಂದ್ಯದಲ್ಲಿ ಮುಂಬೈ ಮೀಟಿಯೋರ್ಸ್‌ಗೆ ಟಾರ್ಪೆಡೋಸ್‌ ತಂಡ ಶರಣಾಯಿತು.

ಚೆನ್ನೈ: ಚೆನ್ನೈನ ಜವಾಹರ್ ಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿಂದು ನಡೆದ ರೋಚಕ ಹಣಾಹಣಿಯಲ್ಲಿ ಮುಂಬೈ ಮೀಟಿಯೋರ್ಸ್ ವಿರುದ್ಧ ಬೆಂಗಳೂರು ಟಾರ್ಪಿಡೋಸ್ 3-5 ಸೆಟ್ ಗಳ ಅಂತರದಲ್ಲಿ ಪರಾಭವಗೊಂಡಿತು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ ವಾಲಿಬಾಲ್ ಪ್ರೇಮಿಗಳ ಹರ್ಷೋದ್ಘಾರದ ನಡುವೆ ಪಂದ್ಯ ಭಾರೀ ಪೈಪೋಟಿಯಿಂದ ಕೂಡಿತ್ತು. ಉಸಿರು ಬಿಗಿ ಹಿಡಿದು ಯಾರಿಗೆ ವಿಜಯದ ಮಾಲೆ ಒಲಿಯಲಿದೆ ಎನ್ನುವ ಕುತೂಹಲ ಮನೆ ಮಾಡಿತ್ತು. ಅಂತಿಮವಾಗಿ 15-8, 12-15, 10-15, 15 - 11 ಹಾಗೂ 15-9 ರ ಅಂತರದಲ್ಲಿ ಮುಂಬೈ ಮೀಟಿಯೋರ್ಸ್ ಗೆಲುವು ದಾಖಲಿಸಿತು. ಮೊದಲ ಹಾಗೂ ನಾಲ್ಕನೇ ಸೆಟ್ ನಲ್ಲಿ ಗೆಲುವು ಸಾಧಿಸಿದ ಬೆಂಗಳೂರು ಟಾರ್ಪಿಡೋಸ್ ನಿರ್ಣಾಯಕ ಫೈನಲ್ ಸೆಟ್ ನಲ್ಲಿ ಬಾಂಬೆ ತಂಡದ ಆಕ್ರಮಣಕಾರಿ ಆಟ, ಆಕರ್ಷಕ ಸ್ಮಾಷ್ ಹಾಗೂ ವ್ಯವಸ್ಥಿತವಾಗಿ ಬ್ಲಾಕ್ ಮಾಡುವ ತಂತ್ರಗಳ ಮೂಲಕ ಮುಂಬೈ ಮೀಟಿಯೋರ್ಸ್ ಆಟಗಾರರು ಬೆಂಗಳೂರು ಟಾರ್ಪಿಡೋಸ್ ಆಟಗಾರರನ್ನು ಕಟ್ಟಿಹಾಕಿದರು.