ಇಂದು ದ.ಆಫ್ರಿಕಾ vs ವಿಂಡೀಸ್‌ ವರ್ಚುವಲ್‌ ನಾಕೌಟ್‌ ಫೈಟ್‌

| Published : Jun 24 2024, 01:38 AM IST / Updated: Jun 24 2024, 03:23 AM IST

ಇಂದು ದ.ಆಫ್ರಿಕಾ vs ವಿಂಡೀಸ್‌ ವರ್ಚುವಲ್‌ ನಾಕೌಟ್‌ ಫೈಟ್‌
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕಪ್‌ ಸೂಪರ್‌-8: ಸೆಮಿಫೈನಲ್‌ ದೃಷ್ಟಿಯಲ್ಲಿ 2 ತಂಡಗಳಿಗೂ ನಿರ್ಣಾಯಕ ಪಂದ್ಯ. ಗೆಲ್ಲುವ ತಂಡ ಸೆಮಿಫೈನಲ್‌ಗೆ. ಸೋಲುವ ತಂಡ ಟೂರ್ನಿಯಿಂದ ಔಟ್

ನಾರ್ತ್‌ ಸೌಂಡ್‌: ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸುವ ಕಾತರದಲ್ಲಿರುವ ವೆಸ್ಟ್‌ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಸೋಮವಾರ ನಿರ್ಣಾಯಕ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. 

ಇತ್ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಸೋಲುವ ತಂಡ ದ ಸೆಮಿಫೈನಲ್‌ ಕನಸು ಭಗ್ನಗೊಳ್ಳುವ ಸಾಧ್ಯತೆಯಿದೆ.ಟೂರ್ನಿಯಲ್ಲಿ ಅಜೇಯವಾಗಿ ಉಳಿದಿರುವ ದ.ಆಫ್ರಿಕಾ ಸೂಪರ್‌-8 ಹಂತದಲ್ಲಿ 2 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

 ಆರಂಭಿಕ ಪಂದ್ಯದಲ್ಲಿ ಅಮೆರಿಕವನ್ನು ಸೋಲಿಸಿದ್ದ ತಂಡ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿತ್ತು. ತಂಡ ಈ ಪಂದ್ಯದಲ್ಲಿ ಗೆದ್ದರೆ ಗುಂಪು 2ರಿಂದ ಅಗ್ರಸ್ಥಾನಿಯಾಗಿಯೇ ಸೆಮಿಫೈನಲ್‌ ಪ್ರವೇಶಿಸಲಿದೆ. ಒಂದು ವೇಳೆ ಸೋತರೂ ನೆಟ್‌ ರನ್‌ರೇಟ್‌ನಲ್ಲಿ ಇತರ ತಂಡಗಳಿಂದ ಮುಂದಿದ್ದರೆ ಸೆಮೀಸ್‌ ಪ್ರವೇಶಿಸಬಹುದು.

 ಅತ್ತ ವಿಂಡೀಸ್‌ 2 ಪಂದ್ಯಗಳಿಂದ 2 ಅಂಕ ಸಂಪಾದಿಸಿದೆ. ಇಂಗ್ಲೆಂಡ್‌ ವಿರುದ್ಧ ಸೋತಿದ್ದ ತಂಡ ಕಳೆದ ಪಂದ್ಯದಲ್ಲಿ ಅಮೆರಿಕವನ್ನು ದೊಡ್ಡ ಅಂತರದಲ್ಲಿ ಮಣಿಸಿ ನೆಟ್‌ ರನ್‌ರೇಟ್‌(+1.814) ಉತ್ತಮಪಡಿಸಿಕೊಂಡಿದೆ. ಈ ಪಂದ್ಯದಲ್ಲಿ ಗೆದ್ದರೆ ತಂಡ ಸೆಮಿಫೈನಲ್‌ಗೇರಲಿದ್ದು, ಸೋತರೆ ಹೊರಬೀಳುವುದು ಬಹುತೇಕ ಖಚಿತ.ಪಂದ್ಯ ಆರಂಭ: ಬೆಳಗ್ಗೆ 6 ಗಂಟೆಗೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಹಾಟ್‌ಸ್ಟಾರ್‌.