ಅಂಧರ ಟಿ20: ಪಾಕಿಸ್ತಾನ ವಿರುದ್ಧ ಸರಣಿ ಗೆದ್ದ ಭಾರತ

| Published : Feb 26 2024, 01:30 AM IST

ಸಾರಾಂಶ

ಸುನಿಲ್‌ ರಮೇಶ್‌ ಮತ್ತು ಅಜಯ್‌ ಕುಮಾರ್‌ ಅರ್ಧಶತಕದ ನೆರವಿಂದ ಪಾಕಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಅಂಧರ ಕ್ರಿಕೆಟ್‌ ತಂಡ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 2-1ರಿಂದ ಸರಣಿ ಕೈವಶಪಡಿಸಿಕೊಂಡಿತು.

ದುಬೈ: ಸುನಿಲ್‌ ರಮೇಶ್‌ ಮತ್ತು ಅಜಯ್‌ ಕುಮಾರ್‌ ಅರ್ಧಶತಕದ ನೆರವಿಂದ ಪಾಕಿಸ್ತಾನ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ ಅಂಧರ ಕ್ರಿಕೆಟ್‌ ತಂಡ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಇದರೊಂದಿಗೆ 2-1ರಿಂದ ಸರಣಿ ಕೈವಶಪಡಿಸಿಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 193 ರನ್‌ ಗಳಿಸಿತು. ದುರ್ಗಾರಾವ್‌ 3 ವಿಕೆಟ್‌ ಉರುಳಿಸಿ ಮಿಂಚಿದರು. ಭಾರತ 18.4 ಓವರ್‌ಗಳಲ್ಲಿ ಗೆಲುವಿನ ಗುರಿ ತಲುಪಿತು. ರಮೇಶ್‌ 64, ಅಜಯ್‌ 66 ರನ್‌ ಗಳಿಸಿದರು. ಪ್ರೊ ಲೀಗ್‌ ಹಾಕಿ ಟೂರ್ನಿ: ಐರ್ಲೆಂಡ್‌ ವಿರುದ್ಧ ಭಾರತಕ್ಕೆ ಜಯ

ರೂರ್ಕೆಲಾ: ಎಫ್‌ಐಎಚ್‌ ಪ್ರೊ ಲೀಗ್‌ ಹಾಕಿ ಪಂದ್ಯಾವಳಿಯಲ್ಲಿ ಭಾರತ ಪುರುಷರ ತಂಡ ಐರ್ಲೆಂಡ್‌ ವಿರುದ್ಧ 4-0 ಗೋಲುಗಳ ಜಯ ದಾಖಲಿಸಿದೆ. ಈ ಮೂಲಕ ಲೀಗ್‌ನ ತವರಿನ ಆವೃತ್ತಿಯನ್ನು ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ನೀಲಕಂಠ, ಆಕಾಶ್‌ದೀಪ್‌ ಸಿಂಗ್‌, ಗುರ್ಜಂತ್‌ ಸಿಂಗ್‌ , ಜುಗ್ರಾಜ್‌ ಸಿಂಗ್ ತಲಾ ಒಂದು ಗೋಲು ಗಳಿಸಿದರು. ಟೂರ್ನಿಯಲ್ಲಿ 8 ಪಂದ್ಯಗಳನ್ನಾಡಿರುವ ಭಾರತ 5 ಜಯಗಳೊಂದಿಗೆ 15 ಅಂಕ ಹೊಂದಿದ್ದು, ಅಂಕ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.