ನಾನಾ, ನೀನಾ? ಕೊಹ್ಲಿ ವಿರುದ್ಧ ಸ್ಪರ್ಧೆ ಗೆದ್ದ ಇಶಾಂತ್‌ ಶರ್ಮಾ!

| Published : May 13 2024, 12:00 AM IST / Updated: May 13 2024, 04:20 AM IST

ಸಾರಾಂಶ

ವಿರಾಟ್‌ ಕೊಹ್ಲಿ ಜೊತೆಗಿನ ಸ್ಪರ್ಧೆಯಲ್ಲಿ ಇಶಾಂತ್‌ ಶರ್ಮಾಗೆ ಯಶಸ್ಸು. ಆಪ್ತ ಸ್ನೇಹಿತ ನಡುವೆ ಏರ್ಪಟ್ಟಿದ್ದ ‘ನಾನಾ... ನೀನಾ...’ ಸ್ಪರ್ಧೆ. ಕೊಹ್ಲಿಯನ್ನು ಕಿಚ್ಚಾಯಿಸಿ ಪೆವಿಲಿಯನ್‌ಗೆ ಕಳುಹಿಸಿದ ಹಿರಿಯ ವೇಗಿ.

 ಬೆಂಗಳೂರು :  ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಐಪಿಎಲ್‌ ಪಂದ್ಯದಲ್ಲಿ

ಭಾರತೀಯ ಕ್ರಿಕೆಟ್‌ನ ಹಿರಿಯ ಆಟಗಾರರು, ಆಪ್ತ ಸ್ನೇಹಿತರಾದ ವಿರಾಟ್‌ ಕೊಹ್ಲಿ ಹಾಗೂ ಇಶಾಂತ್‌ ಶರ್ಮಾ ನಡುವೆ ‘ನಾನಾ... ನೀನಾ...?’ ಎನ್ನುವ ಸ್ಪರ್ಧೆ ಏರ್ಪಟ್ಟಿತ್ತು. ಕೊಹ್ಲಿಯನ್ನು ಹೇಗಾದರೂ ಮಾಡಿ ಔಟ್‌ ಮಾಡುತ್ತೇನೆ ಎಂದು ಪಣತೊಟ್ಟಿದ್ದ ಇಶಾಂತ್‌ ಶರ್ಮಾ, ದಿಗ್ಗಜ ಬ್ಯಾಟರ್‌ ತಮಗೆ ಒಂದು ಆಕರ್ಷಕ ಸಿಕ್ಸರ್‌ ಬಾರಿಸಿದರೂ ಎದೆಗುಂದಲಿಲ್ಲ. 

ಅಮೋಘವಾಗಿ ಬ್ಯಾಟ್‌ ಮಾಡುತ್ತಿದ್ದ ಕೊಹ್ಲಿಗೆ ಆಫ್‌ಸ್ಟಂಪ್‌ನಿಂದ ಆಚೆ ಬೌಲ್‌ ಮಾಡಿ ಯಶಸ್ಸು ಸಾಧಿಸಿದರು. ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ಕೊಹ್ಲಿ ಕೀಪರ್‌ಗೆ ಕ್ಯಾಚ್‌ ನೀಡಿದರು. ವಿರಾಟ್‌ ಕೊಹ್ಲಿ ವಿಕೆಟ್‌ ಚೆಲ್ಲಿದ ಬಳಿಕ ತಲೆಬಗ್ಗಿಸಿ ಪೆವಿಲಿಯನ್‌ನತ್ತ ಹಿಂದಿರುಗುವಾಗ ಇಶಾಂತ್‌, ಅವರತ್ತ ಓಡಿ ಅವರನ್ನು ಅಡ್ಡಗಟ್ಟಲು ಯತ್ನಿಸಿದರು. ಕೊಹ್ಲಿ ನಗುತ್ತಲೇ ಪೆವಿಲಿಯನ್‌ಗೆ ಹೆಜ್ಜೆ ಹಾಕಿದರು. ಈ ಇಬ್ಬರು ಆಪ್ತ ಸ್ನೇಹಿತರ ನಡುವಿನ ಸ್ಪರ್ಧೆ ಮೈದಾನದಲ್ಲಿದ್ದ ಇತರ ಆಟಗಾರರ ಮುಖದಲ್ಲೂ ನಗು ತರಿಸಿತು. ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೂ ಖುಷಿ ಪಟ್ಟರು. ಸಾಮಾಜಿಕ ತಾಣಗಳಲ್ಲಿ ಈ ಸನ್ನಿವೇಶದ ವಿಡಿಯೋ ಭಾರಿ ವೈರಲ್‌ ಆಗಿದೆ.