7 ಪಂದ್ಯ ಸೋತ ಆರ್‌ಸಿಬಿಗೆ ಇನ್ನೂ ಇದೆಯಾ ಪ್ಲೇ ಆಫ್‌ ಲಕ್‌?

| Published : Apr 22 2024, 02:04 AM IST / Updated: Apr 22 2024, 04:56 AM IST

7 ಪಂದ್ಯ ಸೋತ ಆರ್‌ಸಿಬಿಗೆ ಇನ್ನೂ ಇದೆಯಾ ಪ್ಲೇ ಆಫ್‌ ಲಕ್‌?
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಸೋಲಿನಿಂದ ಕುಗ್ಗಿ ಹೋಗಿರುವ ತಂಡ ಸದ್ಯ ಪ್ಲೇ-ಆಫ್‌ ಲೆಕ್ಕಾಚಾರದಲ್ಲಿದೆ. ಆದರೆ ಪ್ಲೇ-ಆಫ್‌ ಅವಕಾಶ ಇನ್ನೂ ಇದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಕೋಲ್ಕತಾ: 17ನೇ ಆವೃತ್ತಿ ಐಪಿಎಲ್‌ನಲ್ಲಾದರೂ ಕಪ್‌ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸ, ನಿರೀಕ್ಷೆಯಲ್ಲಿದ್ದ ಆರ್‌ಸಿಬಿ ಅದೇನು ಮಾಡಿದರೂ ತನ್ನ ಕನಸನ್ನು ನನಸು ಮಾಡುವ ಸಾಧ್ಯತೆ ಕಂಡುಬರುತ್ತಿಲ್ಲ. 

ಸತತ ಸೋಲಿನಿಂದ ಕುಗ್ಗಿ ಹೋಗಿರುವ ತಂಡ ಸದ್ಯ ಪ್ಲೇ-ಆಫ್‌ ಲೆಕ್ಕಾಚಾರದಲ್ಲಿದೆ. ಆದರೆ ತಂಡಕ್ಕೆ ಪ್ಲೇ-ಆಫ್‌ ಅವಕಾಶ ಇನ್ನೂ ಇದೆಯಾ ಎಂಬ ಕುತೂಹಲ ಅಭಿಮಾನಿಗಳದ್ದು. ಆರ್‌ಸಿಬಿ ಟೂರ್ನಿಯಲ್ಲಿ ಈಗಾಗಲೇ 8 ಪಂದ್ಯಗಳನ್ನಾಡಿದ್ದು, 1ರಲ್ಲಿ ಗೆದ್ದು 7 ಪಂದ್ಯಗಳಲ್ಲಿ ಪರಾಭವಗೊಂಡಿದೆ. 

ತಂಡಕ್ಕಿನ್ನು 6 ಪಂದ್ಯ ಆಡಲು ಬಾಕಿಯಿದೆ. ಒಂದು ವೇಳೆ ಇನ್ನುಳಿದ ಎಲ್ಲಾ ಪಂದ್ಯ ಗೆದ್ದರೂ ಆಗುವುದು ಒಟ್ಟು 14 ಅಂಕ. 10 ತಂಡಗಳಿರುವ ಟೂರ್ನಿಯಲ್ಲಿ ಪ್ಲೇ-ಆಫ್‌ ಪ್ರವೇಶಿಸಬೇಕಿದ್ದರೆ ಕನಿಷ್ಠ 8 ಪಂದ್ಯವಾದರೂ ಗೆಲ್ಲಲೇಬೇಕು. ಅಂದರೆ 16 ಅಂಕ ಬೇಕು. ಹೀಗಾಗಿ ಸದ್ಯಕ್ಕೆ ಕ್ಯಾಲ್ಕ್ಯುಲೇಟರ್‌ ಹಿಡಿದು ಹೇಗೆ ಲೆಕ್ಕ ಹಾಕಿದರೂ ಆರ್‌ಸಿಬಿಗೆ ಪ್ಲೇ-ಆಫ್‌ ಅವಕಾಶ ಕಡಿಮೆ. ಆದರೆ ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಸಂಭವಿಸಬಹುದು. ಹೀಗಾಗಿ ಅಭಿಮಾನಿಗಳು ಭರವಸೆ ಕೈ ಬಿಡದೆ ಪವಾಡ ಘಟಿಸಲು ಕಾಯಬೇಕಿದೆ.

01ನೇ ಬಾರಿ: ಆರ್‌ಸಿಬಿ ಐಪಿಎಲ್‌ನಲ್ಲಿ 1 ರನ್‌ ಅಂತರದಲ್ಲಿ ಸೋತಿದ್ದು ಇದೇ ಮೊದಲು.

04ನೇ ಬಾರಿ: ಆರ್‌ಸಿಬಿ ಈ ಆವೃತ್ತಿಯ 8 ಪಂದ್ಯಗಳಲ್ಲಿ 4 ಬಾರಿ ಎದುರಾಳಿಗೆ ಪವರ್‌-ಪ್ಲೇನಲ್ಲಿ 70+ ರನ್‌ ಬಿಟ್ಟುಕೊಟ್ಟಿದೆ. ಇದು ಆವೃತ್ತಿಯೊಂದರಲ್ಲಿ ಯಾವುದೇ ತಂಡಗಳ ಪೈಕಿ ಗರಿಷ್ಠ.