ಸಾರಾಂಶ
ನವದೆಹಲಿ: ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಈ ವಾರಾಂತ್ಯದಲ್ಲಿ ಎಲ್ಲಾ ತಂಡಗಳು ಆಟಗಾರರ ಪಟ್ಟಿ ಪ್ರಕಟಿಸಬೇಕಿದೆ. ಆದರೆ ಭಾರತ ತಂಡದಲ್ಲಿ ಎಂದಿನಂತೆ ಆಯ್ಕೆ ಗೊಂದಲ ಏರ್ಪಟ್ಟಿದೆ.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಟೂರ್ನಿಯಲ್ಲಿ ಆಡುವುದು ಖಚಿತ. ಆದರೆ ಮೂವರು ಹಿರಿಯ ಆಟಗಾರರಾದ ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ, ಮೊಹಮದ್ ಶಮಿ ಆಯ್ಕೆ ಬಗ್ಗೆ ಗೊಂದಲವಿದೆ.
ವಿಕೆಟ್ ಕೀಪರ್ ಸ್ಥಾನಕ್ಕೆ ರಾಹುಲ್ ಹಾಗೂ ರಿಷಭ್ ಪಂತ್ ನಡುವೆ ಪೈಪೋಟಿ ಇದೆ. ರಾಹುಲ್ ತಂಡಕ್ಕೆ ಆಯ್ಕೆಯಾದರೂ ರಿಷಭ್‌ರನ್ನು ಮೊದಲ ಆಯ್ಕೆಯ ಕೀಪರ್ ಆಗಿ ಪರಿಗಣಿಸುವ ಸಾಧ್ಯತೆಯಿದೆ. ಇನ್ನು, ಆಲ್ರೌಂಡರ್ ಸ್ಥಾನಕ್ಕೆ ಜಡೇಜಾ ಜೊತೆ ಅಕ್ಷರ್ ಪಟೇಲ್ ಪೈಪೋಟಿಗಿಳಿದಿದ್ದಾರೆ. ಇಬ್ಬರ ಪೈಕಿ ಒಬ್ಬರು ಮಾತ್ರ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು. ವೇಗಿ ಶಮಿ ಇನ್ನೂ ಫಿಟ್ನೆಸ್ ಸಾಬೀತುಪಡಿಸಿಲ್ಲ.
ಹೀಗಾಗಿ ಅವರ ಆಯ್ಕೆ ಕೂಡಾ ಖಚಿತವಾಗಿಲ್ಲ. ಜಸ್‌ಪ್ರೀತ್ ಬೂಮ್ರಾ ಜೊತೆ ಮೊಹಮದ್ ಸಿರಾಜ್, ಅರ್ಶ್‌ದೀಪ್ ಸಿಂಗ್, ಆವೇಶ್ ಖಾನ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ಸ್ಪಿನ್ನರ್ ಸ್ಥಾನಕ್ಕೆ ರವಿ ಬಿಷ್ಣೋಯ್ ಹಾಗೂ ವರುಣ್ ಚಕ್ರವರ್ತಿ ನಡುವೆ ಪೈಪೋಟಿಯಿದೆ.