ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌: ಫೈನಲ್ ತಲುಪಿದ ಚೆನ್ನೈಯಿನ್ ಎಫ್‌ಸಿ

| Published : Apr 19 2024, 01:07 AM IST / Updated: Apr 19 2024, 04:32 AM IST

ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌: ಫೈನಲ್ ತಲುಪಿದ ಚೆನ್ನೈಯಿನ್ ಎಫ್‌ಸಿ
Share this Article
  • FB
  • TW
  • Linkdin
  • Email

ಸಾರಾಂಶ

ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ಬೆಂಗಳೂರು ಪ್ರಾದೇಶಿಕ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಆಲ್ಕೆಮಿ ಇಂಟರ್ ನ್ಯಾಷನಲ್ ಫುಟ್ಬಾಲ್ ಅಕಾಡೆಮಿಯವನ್ನು 1-0 ಗೋಲುಗಳಿಂದ ಮಣಿಸಿತು.

ಬೆಂಗಳೂರು: ಸರ್ಜಾಪುರದ ಯುನೈಟೆಡ್ ವರ್ಲ್ಡ್ ಅಕಾಡೆಮಿಯಲ್ಲಿ ಮಂಗಳವಾರ ನಡೆದ ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ಬೆಂಗಳೂರು ಪ್ರಾದೇಶಿಕ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ ತಂಡ ಆಲ್ಕೆಮಿ ಇಂಟರ್ ನ್ಯಾಷನಲ್ ಫುಟ್ಬಾಲ್ ಅಕಾಡೆಮಿ ತಂಡವನ್ನು 1-0 ಗೋಲುಗಳಿಂದ ಮಣಿಸಿತು.

ಎರಡೂ ತಂಡಗಳು ನೇರ ಗೆಲುವಿನೊಂದಿಗೆ ತಮ್ಮ ತಮ್ಮ ಗುಂಪುಗಳಲ್ಲಿ ಪ್ರಾಬಲ್ಯ ಸಾಧಿಸಿದವು. ''ಎ'' ಗುಂಪಿನ ಪಂದ್ಯದಲ್ಲಿ ಚೆನ್ನೈಯಿನ್ ಎಫ್‌ಸಿ 6–0 ಗೋಲುಗಳಿಂದ ರಾಮನ್ ಸ್ಪೋರ್ಟ್ಸ್ ಅಕಾಡೆಮಿ ತಂಡವನ್ನು ಮಣಿಸಿತು. ''ಬಿ'' ಗುಂಪಿನ ಪಂದ್ಯದಲ್ಲಿ ಆಲ್ಕೆಮಿ ಇಂಟರ್ ನ್ಯಾಷನಲ್ ತಂಡ ಕಿಕ್ ಸ್ಟಾರ್ಟ್ ಎಫ್ ಸಿ ಕರ್ನಾಟಕ ತಂಡವನ್ನು 4-0 ಗೋಲುಗಳಿಂದ ಮಣಿಸಿದರೆ, ಯಂಗ್ ಬ್ಲೂಸ್ ಎಲೈಟ್ ಎಫ್‌ಸಿ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿತು.

ಚೆನ್ನೈಯಿನ್ ಮತ್ತು ಆಲ್ಕೆಮಿ ನಡುವಿನ ಫೈನಲ್ ಪಂದ್ಯವು ನಿಕಟ ಹೋರಾಟವಾಗಿತ್ತು. ದ್ವಿತೀಯಾರ್ಧದಲ್ಲಿ ಬಾಯ್ಸ್ ಇನ್ ಬ್ಲೂ ತಂಡ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಆಲ್ಕೆಮಿ ಗೋಲ್ ಕೀಪರ್ ಪ್ರಣವ್ ಪಿ 52ನೇ ನಿಮಿಷದಲ್ಲಿ ದಾನಿಯಾಲ್ ಮಕಾಕ್ಮಯಮ್ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಚೆನ್ನೈಯಿನ್ ತಂಡದ ಸಂಜು ಮಂಗರ್ ಮತ್ತೊಂದು ಅವಕಾಶವನ್ನು ಸೃಷ್ಟಿಸಿದ ಕಾರಣ ಈ ಗೋಲು ಪಂದ್ಯಕ್ಕೆ ಜೀವ ತುಂಬಿತು. ಈ ಬಾರಿ, ಆಲ್ಕೆಮಿ ಗೋಲ್ ಕೀಪರ್ ಉತ್ತಮವಾಗಿ ಕಾರ್ಯನಿರ್ವಹಿಸಿದರು, ಪಂದ್ಯದಲ್ಲಿ ತಮ್ಮ ತಂಡವನ್ನು ಉಳಿಸಿಕೊಂಡರು. ಆದಾಗ್ಯೂ, ಆಲ್ಕೆಮಿಯ ಆಕ್ರಮಣಕಾರರು ತಮ್ಮ ಅವಕಾಶಗಳನ್ನು ಹೆಚ್ಚು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ, ಅಂತಿಮವಾಗಿ ಮುಂಬೈನಲ್ಲಿ ನಡೆದ ರಾಷ್ಟ್ರೀಯ ಫೈನಲ್ ನಲ್ಲಿ ಚೆನ್ನೈಯಿನ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ರಾಷ್ಟ್ರೀಯ ಫೈನಲ್ ನಲ್ಲಿ ಆರು ತಂಡಗಳು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿವೆ. ಚೆನ್ನೈನ ಎಫ್ಸಿ, ದೆಹಲಿಯ ಪಂಜಾಬ್ ಎಫ್ಸಿ, ಕೋಲ್ಕತ್ತಾದ ಈಸ್ಟ್ ಬೆಂಗಾಲ್ ಎಫ್ಸಿ, ಮುಂಬೈನ ರಿಲಯನ್ಸ್ ಫೌಂಡೇಶನ್ ಯಂಗ್ ಚಾಂಪ್ಸ್ ಮತ್ತು ಮುಂಬೈ ಸಿಟಿ ಎಫ ಸಿ ಮತ್ತು ಶಿಲ್ಲಾಂಗ್ ಲೆಗ್ ಗೆದ್ದ ಫುಟ್ಬಾಲ್ 4 ಚೇಂಜ್ ತಂಡಗಳು ಸೇರಿವೆ. ಪಂದ್ಯಾವಳಿಯ ಪ್ರಾದೇಶಿಕ ಸುತ್ತುಗಳು ಏಪ್ರಿಲ್ 18ರ ಗುರುವಾರ ಗೋವಾದಲ್ಲಿ ಕೊನೆಗೊಳ್ಳಲಿದೆ.