ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ವಿಂಡೀಸ್‌ನ ಖ್ಯಾತ ಕ್ರಿಕೆಟಿಗ ಕ್ರಿಸ್‌ ಗೇಲ್‌

| Published : Oct 04 2024, 01:03 AM IST / Updated: Oct 04 2024, 03:29 AM IST

ಸಾರಾಂಶ

ಮೋದಿ ಜೊತೆಗಿನ ಸಂಭಾಷಣೆಯ ವಿಡಿಯೋವನ್ನು ಗೇಲ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಭೇಟಿಯ ಫೋಟೋ, ವಿಡಿಯೋಗಳು ವೈರಲ್‌ ಆಗಿವೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ವೆಸ್ಟ್‌ಇಂಡೀಸ್‌ಗ ಖ್ಯಾತ ಕ್ರಿಕೆಟಿಗ ಕ್ರಿಸ್‌ ಗೇಲ್‌ ಭೇಟಿಯಾಗಿದ್ದಾರೆ. ಬುಧವಾರ ಜಮೈಕಾದ ಪ್ರಧಾನಿ ಆ್ಯಂಡ್ರೂ ಹೊಲ್‌ನೆಸ್‌ರ ಭಾರತ ಭೇಟಿ ವೇಳೆ ಅವರೊಂದಿಗೆ ಗೇಲ್‌ ಕೂಡಾ ಆಗಮಿಸಿದ್ದರು. 

ಸಮಾರಂಭದ ವೇಳೆ ಗೇಲ್‌ರ ಬಳಿ ತೆರಳಿದ ಪ್ರಧಾನಿ ಮೋದಿ, ಅವರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಮೋದಿ ಜೊತೆಗಿನ ಸಂಭಾಷಣೆಯ ವಿಡಿಯೋವನ್ನು ಗೇಲ್‌ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಭೇಟಿಯ ಫೋಟೋ, ವಿಡಿಯೋಗಳು ವೈರಲ್‌ ಆಗಿವೆ.

ಮೊದಲ ಏಕದಿನ: ಐರ್ಲೆಂಡ್‌ ವಿರುದ್ಧ ಗೆದ್ದ ದಕ್ಷಿಣ ಆಫ್ರಿಕಾ

ಅಬು ಧಾಬಿ: ಐರ್ಲೆಂಡ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 139 ರನ್‌ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 9 ವಿಕೆಟ್‌ಗೆ 271 ರನ್ ಕಲೆಹಾಕಿತು. ರ್‍ಯಾನ್‌ ರಿಕೆಲ್ಟನ್‌ 91, ಟ್ರಿಸ್ಟನ್‌ ಸ್ಟಬ್ಸ್‌ 79 ರನ್‌ ಕೊಡುಗೆ ನೀಡಿದರು. ಐರ್ಲೆಂಡ್‌ನ ಮಾರ್ಕ್‌ ಅಡೈರ್‌ 4, ಕ್ರೇಗ್‌ ಯಂಗ್‌ 3 ವಿಕೆಟ್‌ ಪಡೆದರು. 

ದೊಡ್ಡ ಗುರಿ ಬೆನ್ನತ್ತಿದ ಐರ್ಲೆಂಡ್‌ 31.5 ಓವರ್‌ಗಳಲ್ಲಿ 132 ರನ್‌ಗೆ ಗಂಟುಮೂಟೆ ಕಟ್ಟಿತು. ಜಾರ್ಜ್‌ ಡೊಕ್ರೆಲ್‌(21) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ಗಳಿಸಿದರು. ಲಿಜಾರ್ಡ್‌ ವಿಲಿಯಮ್ಸ್‌ 4 ವಿಕೆಟ್‌ ಕಿತ್ತರು. 2ನೇ ಪಂದ್ಯ ಶುಕ್ರವಾರ ನಡೆಯಲಿದೆ.