ಸಾರಾಂಶ
ಹೈದರಾಬಾದ್: ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಪ್ರದೀಪ್ ನರ್ವಾಲ್ ನಾಯಕತ್ವದ ಬುಲ್ಸ್‌ಗೆ ಗುಜರಾತ್ ಜೈಂಟ್ಸ್ ವಿರುದ್ಧ 32-36 ಅಂಕಗಳಿಂದ ಸೋಲು ಎದುರಾಯಿತು.ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬುಲ್ಸ್, 11ನೇ ನಿಮಿಷದಲ್ಲಿ ಗುಜರಾತ್‌ನ ಆಲೌಟ್ ಮಾಡಿ 13-9ರಲ್ಲಿ ಮುನ್ನಡೆ ಪಡೆಯಿತು.
ಮೊದಲಾರ್ಧಕ್ಕೆ ಬುಲ್ಸ್ ಮುನನ್ಡೆ 19-16ಕ್ಕೆ ಏರಿಕೆಯಾಯಿತು. ಆದರೆ ದ್ವಿತೀಯಾರ್ಧದಲ್ಲಿ ಬುಲ್ಸ್ ರೈಡರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದ ಜೈಂಟ್ಸ್ ಗೆಲುವು ತನ್ನದಾಗಿಸಿಕೊಂಡಿತು. ಪ್ರದೀಪ್ 9 ಹಾಗೂ ಅಜಿಂಕ್ಯಾ ಪವಾರ್ 7 ರೈಡ್ ಅಂಕ ಗಳಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಮೊದಲಾರ್ಧ 13 ರೈಡ್ ಅಂಕ ಪಡೆದಿದ್ದ ಬುಲ್ಸ್, ದ್ವಿತೀಯಾರ್ಧದಲ್ಲಿ ಕೇವಲ 7 ಅಂಕ ಪಡೆಯಿತು.ಗುಜರಾತ್‌ನ ಪರ್ತೀಕ್ ದಹಿಯಾ 8, ಹಿಮಾನ್ಶು ಸಿಂಗ್ 7, ಗುಮಾನ್ ಸಿಂಗ್, ಸೋಂಬೀರ್ ತಲಾ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಜೈಪುರ ಜಯಭೇರಿ
ಭಾನುವಾರದ ಆರಂಭಿಕ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ವಿರುದ್ಧ ಜೈಪುರ ಪಿಂಕ್ ಪ್ಯಾಂಥರ್ಸ್ 39-34 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ತಾರಾ ರೈಡರ್ ಅರ್ಜುನ್ ದೇಶ್‌ವಾಲ್(15 ಅಂಕ) ಜೈಪುರ ಗೆಲುವಿನ ರೂವಾರಿ ಎನಿಸಿಕೊಂಡರು. ಬೆಂಗಾಲ್ ಪರ ನಿತಿನ್ ಧನ್‌ಕರ್ 13 ಅಂಕ, ಮಣೀಂದರ್ ಸಿಂಗ್ 8 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.ಇಂದಿನ ಪಂದ್ಯಗಳುಯುಪಿ ಯೋಧಾಸ್-ದಬಾಂಗ್ ಡೆಲ್ಲಿ, ರಾತ್ರಿ 8 ಗಂಟೆಗೆಪುಣೇರಿ ಪಲ್ಟನ್-ಪಾಟ್ನಾ ಪೈರೇಟ್ಸ್, ರಾತ್ರಿ 9 ಗಂಟೆಗೆ