ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ: ಆಲ್ಕರಜ್‌, ಗಾಫ್‌ 3ನೇ ಸುತ್ತಿಗೆ

| Published : Jul 04 2024, 01:13 AM IST / Updated: Jul 04 2024, 04:24 AM IST

ಸಾರಾಂಶ

2021ರ ಯುಎಸ್‌ ಓಪನ್ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲರ್‌ ವಿರುದ್ಧ 3-7, 7-4, 6-4, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.

ಲಂಡನ್‌: ಹಾಲಿ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಹಾಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಕೊಕೊ ಗಾಫ್‌ ಕೂಡಾ 3ನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.ಬುಧವಾರ ನಡೆದ ಪುರುಷರ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ ಆಲ್ಕರಜ್‌ ಆಸ್ಟ್ರೇಲಿಯಾದ ಅಲೆಕ್ಸಾಂಡರ್‌ ವುಕಿಚ್‌ ವಿರುದ್ಧ 7-6(7/5), 6-2, 6-2 ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು.

 2021ರ ಯುಎಸ್‌ ಓಪನ್ ಚಾಂಪಿಯನ್‌ ಡ್ಯಾನಿಲ್‌ ಮೆಡ್ವೆಡೆವ್‌ ಅವರು ಫ್ರಾನ್ಸ್‌ನ ಅಲೆಕ್ಸಾಂಡರ್‌ ಮುಲ್ಲರ್‌ ವಿರುದ್ಧ 3-7, 7-4, 6-4, 7-5 ಸೆಟ್‌ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು. 8ನೇ ಶ್ರೇಯಾಂಕಿತ ಕ್ಯಾಸ್ಪೆರ್‌ ರುಡ್ ಸೋತು ಹೊರಬಿದ್ದರು.ಇದೇ ವೇಳೆ ಮಹಿಳಾ ಸಿಂಗಲ್ಸ್‌ನಲ್ಲಿ ಅಮೆರಿಕದ ಗಾಫ್‌ ರೊಮಾನಿಯಾದ ಅಂಕಾ ಟೊಡೊನಿಯನ್ನು 6-2, 6-1 ಸೆಟ್‌ಗಳಲ್ಲಿ ಸೋಲಿಸಿದರು.

ನಗಾಲ್‌ ಸವಾಲು ಅಂತ್ಯ

ಭಾರತದ ಸುಮಿತ್‌ ನಗಾಲ್‌ ಸಿಂಗಲ್ಸ್‌ ಬಳಿಕ ಪುರುಷರ ಡಬಲ್ಸ್‌ನಲ್ಲೂ ಮೊದಲ ಸುತ್ತಿನಲ್ಲೇ ಸೋತು ಟೂರ್ನಿಯಿಂದ ಹೊರಬಿದ್ದರು. ಸರ್ಬಿಯಾದ ಡುಸಾನ್‌ ಲಜೊವಿಚ್‌ ಜೊತೆಗೂಡಿ ಕಣಕ್ಕಿಳಿದಿದ್ದ ನಗಾಲ್‌, ಸ್ಪೇನ್‌ನ ಮುನಾರ್‌-ಪೆಡ್ರೊ ಮಾಟ್ಟಿನೆಜ್‌ ವಿರುದ್ಧ 2-6, 2-6ರಲ್ಲಿ ಸೋಲನುಭವಿಸಿದರು.