ಧೋನಿ ಬಗ್ಗೆ ಬಿಸಿಸಿಐ ತನಿಖೆ ನಡೆಸಬೇಕು ಎಂದು ರಾಜೇಶ್‌ ಅವರು ಆಗ್ರಹಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್‌ನಿಂದ ಅವರನ್ನು ದೂರ ಇಡುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ನವದೆಹಲಿ: ಸ್ವಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ವಿರುದ್ಧ ರಾಜೇಶ್‌ ಕುಮಾರ್‌ ಮೌರ್ಯ ಎಂಬವರು ಬಿಸಿಸಿಐಗೆ ದೂರು ಸಲ್ಲಿಸಿದ್ದಾರೆ. 

ಧೋನಿ ಅವರು ಭಾರತ ತಂಡದ ನಾಯಕ ಹಾಗೂ ವಿಕೆಟ್‌ ಕೀಪರ್‌ ಬ್ಯಾಟರ್‌ ಆಗಿ ಆಡಿದ್ದು, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ 2017ರಿಂದ ಅವರು ಆರ್ಕಾ ಕ್ರಿಕೆಟ್‌ ಅಕಾಡೆಮಿ ನಡೆಸುತ್ತಿದ್ದರು. 

ಇದು ಬಿಸಿಸಿಐ ಪ್ರಕಾರ ನಿಯಮಕ್ಕೆ ವಿರುದ್ಧ. ಹೀಗಾಗಿ ಧೋನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ರಾಜೇಶ್‌ ಕುಮಾರ್‌ ಮೌರ್ಯ ಒತ್ತಾಯಿಸಿದ್ದಾರೆ.

ಧೋನಿ ಬಗ್ಗೆ ಬಿಸಿಸಿಐ ತನಿಖೆ ನಡೆಸಬೇಕು ಎಂದು ರಾಜೇಶ್‌ ಅವರು ಆಗ್ರಹಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಒತ್ತಾಯ ಮಾಡಿದ್ದಾರೆ. ಅಲ್ಲದೆ ಕ್ರಿಕೆಟ್‌ನಿಂದ ಅವರನ್ನು ದೂರ ಇಡುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.