ಆರ್‌ಸಿಬಿಯ ಹೊಡೆತಕ್ಕೆ ನಲುಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಸೋಲಿನ ಆಘಾತದಿಂದ ಹೊರಬರುವ ಮೊದಲೇ ಚೆನ್ನೈನಿಂದ ಗುವಾಹಟಿಗೆ ಪ್ರಯಾಣಿಸಿ ಮತ್ತೊಂದು ಕಠಿಣ ಸವಾಲು ಎದುರಿಸಬೇಕಾದ ಅನಿವಾರ್ಯತೆ 

ಗುವಾಹಟಿ: ಆರ್‌ಸಿಬಿಯ ಹೊಡೆತಕ್ಕೆ ನಲುಗಿರುವ ಚೆನ್ನೈ ಸೂಪರ್‌ ಕಿಂಗ್ಸ್‌, ಸೋಲಿನ ಆಘಾತದಿಂದ ಹೊರಬರುವ ಮೊದಲೇ ಚೆನ್ನೈನಿಂದ ಗುವಾಹಟಿಗೆ ಪ್ರಯಾಣಿಸಿ ಮತ್ತೊಂದು ಕಠಿಣ ಸವಾಲು ಎದುರಿಸಬೇಕಾದ ಅನಿವಾರ್ಯತೆಗೆ ಸಿಲುಕಿದೆ. 

ಭಾನುವಾರ ಸಂಜೆ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆಗೆ ರಾಜಸ್ಥಾನ ರಾಯಲ್ಸ್‌ ಚಾಲೆಂಜ್‌ ಎದುರಾಗಲಿದೆ. ಎಂ.ಎಸ್.ಧೋನಿಯಂಥ ಬ್ಯಾಟರ್‌ 9ನೇ ಕ್ರಮಾಂಕದಲ್ಲಿ ಆಡುವುದನ್ನು ನೋಡಿದಾಗ ತಂಡದ ಬ್ಯಾಟಿಂಗ್‌ ಪಡೆ ಅತ್ಯಂತ ಬಲಿಷ್ಠವಾಗಿ ತೋರಿದರೂ, ಕೆಲ ಪ್ರಮುಖ ಸಮಸ್ಯೆಗಳನ್ನು ತಂಡ ಎದುರಿಸುತ್ತಿದೆ ಎಂಬುದು ಸುಳ್ಳಲ್ಲ. 

ಇನ್ನು ರಾಜಸ್ಥಾನಕ್ಕೆ ವಿದೇಶಿ ಬ್ಯಾಟರ್‌ಗಳ ಕೊರತೆ ಇದ್ದು, ತನ್ನ ಭಾರತೀಯ ಸ್ಟಾರ್ಸ್‌ ಮೇಲೆಯೇ ಹೆಚ್ಚು ಅವಲಂಬಿತಗೊಂಡಿದೆ. ಈ ಪಂದ್ಯದಲ್ಲೂ ರಿಯಾನ್‌ ಪರಾಗ್‌ ರಾಯಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

ಪಂದ್ಯ ಆರಂಭ: ಸಂಜೆ 7.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌