ಸಾರಾಂಶ
-ದೈಹಿಕ ಶಿಕ್ಷಣ ನಿರ್ದೇಶಕ, ಖೋ-ಖೋ ತರಬೇತುದಾರ ಎಚ್.ತಿಪ್ಪೇಸ್ವಾಮಿಗೆ ಬೀಳ್ಕೊಡುಗೆ
---ಕನ್ನಡಪ್ರಭ ವಾರ್ತೆ ಚಳ್ಳಕೆರೆ: ಎಚ್‌ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ, ಖೋ-ಖೋ ತರಬೇತುದಾರ ಎಚ್.ತಿಪ್ಪೇಸ್ವಾಮಿ ಸೇವೆಯಿಂದ ನಿವೃತ್ತಿ ಹಿನ್ನೆಲೆ ಕಾಲೇಜು ಸಭಾಂಗಣದಲ್ಲಿ ಬೀಳ್ಕೊಡಿಗೆ ಸಮಾರಂಭ ಏರ್ಪಡಿಸಲಾಗಿತ್ತು.
ಶಾಸಕ ಅಧ್ಯಕ್ಷ ಟಿ.ರಘುಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಆದರೆ, ಎಚ್.ತಿಪ್ಪೇಸ್ವಾಮಿ ಈ ಕಾಲೇಜಿಗೆ ಆಗಮಿಸಿ, ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಕ್ರೀಡಾಪಟುಗಳಲ್ಲಿ ಶಿಸ್ತು ರೂಪಿಸುವುದು ಕಷ್ಟ. ಎಲ್ಲಾ ಕ್ರೀಡಾಪಟುಗಳಿಗೂ ಸೂಕ್ತ ಮಾರ್ಗದರ್ಶನ ನೀಡಿ, ಶಿಸ್ತು ಉಂಟಾಗುವಂತೆ ಮಾಡಿದ್ಧಾರೆ. ಚಳ್ಳಕೆರೆಯಲ್ಲಿ ಖೋ-ಖೋ ತರಬೇತುದಾರರಾಗಿ ವೃತ್ತಿ ಜೀವನ ಆರಂಭಿಸಿದರು. ನಿವೃತ್ತರಾದರೂ ಕ್ರೀಡಾ ಕ್ಷೇತ್ರದಲ್ಲಿ ಸದಾ ತಮ್ಮ ಸೇವೆ ಮುಂದುವರೆಸಲೆಂದು ಆಶಿಸುತ್ತೇನೆ ಎಂದರು.ಅಭಿನಂದನೆ ಸ್ವೀಕರಿಸಿ ಭಾವುಕರಾಗಿ ಮಾತನಾಡಿ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ, ಎಲ್ಲಿ ನಾನು ಕ್ರೀಡೆಯನ್ನು ಆರಂಭಿಸಿದ್ದೇನೋ ಅದೇ ನೆಲದಲ್ಲಿ ನನಗೆ ಬೀಳ್ಕೊಡಿಗೆ ಸಮಾರಂಭ ಏರ್ಪಡಿಸಿರುವುದು ಸಂತಸ ತಂದಿದೆ. ನನ್ನ ಕ್ರೀಡಾಕ್ಷೇತ್ರದ ಸೇವೆಗೆ ಪತ್ನಿ ಕೆ.ಕೋಮಲ ಪ್ರೇರಣೆಯಾಗಿತ್ತು. ಸೇವೆಯಿಂದ ನಿವೃತ್ತರಾದರೂ ಕ್ರೀಡಾಕ್ಷೇತ್ರದಲ್ಲಿ ನನ್ನ ಸೇವೆಯನ್ನು ಮುಂದುವರೆಸುವೆ ಎಂದರು.
ಪ್ರಾಂಶುಪಾಲ ಎಸ್.ಮಂಜುನಾಥ ಮಾತನಾಡಿ, ತಿಪ್ಫೇಸ್ವಾಮಿಯವರ ವಯೋನಿವೃತ್ತಿ ಪಡೆಯುತ್ತಿದ್ದರೂ ಅವರ ಮಾರ್ಗದರ್ಶನ ಕ್ರೀಡಾ ಕ್ಷೇತ್ರಕ್ಕೆ ಅವಶ್ಯಕತೆ ಇದೆ. ಕ್ರೀಡಾ ಕ್ಷೇತ್ರದಲ್ಲಿ ಚಳ್ಳಕೆರೆ ಖ್ಯಾತಿಯಾಗಿದ್ದರೆ ಅದರಲ್ಲಿ ತಿಪ್ಪೇಸ್ವಾಮಿ ಪಾಲು ಅಧಿಕ ಎಂದರು.ಚಿತ್ರಹಳ್ಳಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎಂ.ಶಿವಲಿಂಗಪ್ಪ, ಹಿರಿಯೂರು ವಾಣಿ ಸಕ್ಕರೆ ಕಾಲೇಜು ಧರಣೇಂದ್ರಯ್ಯ, ಸಿ.ಮಹೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆರಾಮಪ್ಪ, ಎಂ.ಎಸ್.ಮುತ್ತಯ್ಯ, ಸುಭಾನು, ರಘುನಾಥ, ಕೆ.ಚಿತ್ತಯ್ಯ ಇದ್ದರು.
-----ಪೋಟೋ-೦೧ಸಿಎಲ್‌ಕೆ೩
ಚಳ್ಳಕೆರೆ ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ, ಖೋ-ಖೋ ತರಬೇತುದಾರ ಎಚ್.ತಿಪ್ಪೇಸ್ವಾಮಿ ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.