ಸಾರಾಂಶ
ಕೂಚ್ ಬೆಹಾರ್ ರಾಷ್ಟ್ರೀಯ ಅಂಡರ್ 19 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ತಂಡ ಕರ್ನಾಟಕದ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ. ಮುಂಬೈ ಪರ ಆಯುಶ್ ಮಾಟ್ರೆ(148) ಭರ್ಜರಿ ಶತಕ ಸಿಡಿಸಿದರು.
ಶಿವಮೊಗ್ಗ: ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ರಾಷ್ಟ್ರೀಯ ಅಂಡರ್ 19 ಟೂರ್ನಿಯ ಫೈನಲ್‌ನಲ್ಲಿ ಮುಂಬೈ ತಂಡ ಕರ್ನಾಟಕದ ವಿರುದ್ಧ ಮೊದಲ ದಿನ ಮೇಲುಗೈ ಸಾಧಿಸಿದೆ, ಶುಕ್ರವಾರ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 328 ರನ್ ಗಳಿಸಿದೆ. ಮುಂಬೈ ಪರ ಆಯುಶ್ ಮಾಟ್ರೆ(148) ಭರ್ಜರಿ ಶತಕ ಸಿಡಿಸಿದರು. ಆಯುಶ್ ಸಚಿನ್ ಔಟಾಗದೆ 64, ನೂತನ್ 44 ರನ್ ಗಳಿಸಿದರು. ಕರ್ನಾಟಕದ ಪರ ಸಮರ್ಥ್ ಎನ್. ಹಾಗೂ ಹಾರ್ದಿಕ್ ರಾಜ್ ತಲಾ 2 ವಿಕೆಟ್ ಗಳಿಸಿದರು.
ಮಹಿಳಾ ಏಕದಿನ: ರಾಜ್ಯ
ತಂಡಕ್ಕೆ ಮೂರನೇ ಗೆಲುವು
ಕಟಕ್: ಹಿರಿಯ ಮಹಿಳೆಯರ ರಾಷ್ಟ್ರೀಯ ಏಕದಿನ ಟೂರ್ನಿಯಲ್ಲಿ ಕರ್ನಾಟಕ 3ನೇ ಗೆಲುವು ಸಾಧಿಸಿದೆ. ಶುಕ್ರವಾರ ರಾಜ್ಯ ತಂಡ ಜಾರ್ಖಂಡ್ ವಿರುದ್ಧ 17 ರನ್‌ಗಳಿಂದ ಜಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕರ್ನಾಟಕದ ವನಿತೆಯರು ಮೂವರ ಅರ್ಧಶತಕದ ನೆರವಿನಿಂದ 8 ವಿಕೆಟ್‌ಗೆ 265 ರನ್ ಕಲೆಹಾಕಿತು. ರೋಶನಿ ಕಿರಣ್ 75, ಮಿಥಿಲಾ ವಿನೋದ್ 57, ನಿಕ್ಕಿ ಪ್ರಸಾದ್ 50 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಜಾರ್ಖಂಡ್ ಪರ ದೇವಯಾನಿ 3 ವಿಕೆಟ್ ಪಡೆದು ಮಿಂಚಿದರು. ಗೊಡ್ಡ ಗುರಿ ಬೆನ್ನತ್ತಿದ ಜಾರ್ಖಂಡ್ 49.4 ಓವರ್‌ಗಳಲ್ಲಿ 248ಕ್ಕೆ ಆಲೌಟ್ ಆಯಿತು. ರಿತು(82), ಖುಷ್ಬೂ ಕುಮಾರಿ(38) ಹೋರಾಟ ಗೆಲುವಿಗೆ ಸಾಕಾಗಲಿಲ್ಲ. ಪ್ರತ್ಯುಶಾ 3 ವಿಕೆಟ್ ಕಿತ್ತರು.