ಕೆವಿನ್‌ ಸಂಭ್ರಮಾಚರಣೆಗೆ ಮನಸೋತ ಕ್ರಿಕೆಟ್‌ ಫ್ಯಾನ್ಸ್‌

| Published : Jan 27 2024, 01:19 AM IST / Updated: Jan 27 2024, 11:22 AM IST

ಸಾರಾಂಶ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಉಸ್ಮಾನ್‌ ಖವಾಜ ವಿಕೆಟ್‌ ಪಡೆದ ವೆಸ್ಟ್‌ಇಂಡೀಸ್‌ನ ಕೆವಿನ್‌ ಸಿಂಕ್ಲೇರ್‌ ಗಾಳಿಯಲ್ಲಿ ಹಾರಿ ಪಲ್ಟಿ ಹೊಡೆಯುವ ಮೂಲಕ ವಿಶೇಷವಾಗಿ ಸಂಭ್ರಮಾಚರಣೆ ನಡೆಸಿದರು

ಬ್ರಿಸ್ಬೆನ್‌: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಉಸ್ಮಾನ್‌ ಖವಾಜ ವಿಕೆಟ್‌ ಪಡೆದ ವೆಸ್ಟ್‌ಇಂಡೀಸ್‌ನ ಕೆವಿನ್‌ ಸಿಂಕ್ಲೇರ್‌ ಗಾಳಿಯಲ್ಲಿ ಹಾರಿ ಪಲ್ಟಿ ಹೊಡೆಯುವ ಮೂಲಕ ವಿಶೇಷವಾಗಿ ಸಂಭ್ರಮಾಚರಣೆ ನಡೆಸಿದರು. 

ಇದರ ಫೋಟೋ, ವಿಡಿಯೋ ಭಾರೀ ವೈರಲ್‌ ಆಗಿದ್ದು, ಕ್ರೀಡಾಭಿಮಾನಿಗಳು ಕೆವಿನ್‌ ಸೆಲೆಬ್ರೇಷನ್‌ಗೆ ಮನಸೋತಿದ್ದಾರೆ. 2ನೇ ಟೆಸ್ಟ್‌ನಲ್ಲಿ ವೆಸ್ಟ್‌ಇಂಡೀಸ್‌ಗೆ ಆಸ್ಟ್ರೇಲಿಯಾ ತಿರುಗೇಟು ನೀಡಿದೆ. 

ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್‌ನ 311ಕ್ಕೆ ಉತ್ತರವಾಗಿ ಆಸೀಸ್‌ 9 ವಿಕೆಟ್‌ಗೆ 289 ರನ್‌ ಗಳಿಸಿ, ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ 22 ರನ್‌ ಹಿನ್ನಡೆಗೊಳಗಾಯಿತು. 5

4ಕ್ಕೆ 5 ವಿಕೆಟ್‌ ಕಳೆದುಕೊಂಡ ಬಳಿಕ ಖವಾಜಾ(75), ಅಲೆಕ್ಸ್‌ ಕೇರ್ರಿ(65), ನಾಯಕ ಕಮಿನ್ಸ್‌ (ಔಟಾಗದೆ 64) ಹೋರಾಟ ತಂಡವನ್ನು ಕಾಪಾಡಿತು. 

2ನೇ ಇನ್ನಿಂಗ್ಸ್‌ ಆರಂಭಿಸಿರುವ ವಿಂಡೀಸ್‌ 2ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 13 ರನ್ ಗಳಿಸಿದ್ದು, 35 ರನ್‌ ಮುನ್ನಡೆಯಲ್ಲಿದೆ.