ಕ್ರಿಕೆಟಿಗ ಶೇನ್‌ ವಾಟ್ಸನ್‌ ವಿರಚಿತ ‘ದಿವಿನ್ನರ್ಸ್‌ ಮೈಂಡ್‌ಸೆಟ್‌’ ಪುಸ್ತಕ ಬಿಡುಗಡೆ

| Published : May 21 2024, 12:36 AM IST / Updated: May 21 2024, 04:27 AM IST

ಕ್ರಿಕೆಟಿಗ ಶೇನ್‌ ವಾಟ್ಸನ್‌ ವಿರಚಿತ ‘ದಿವಿನ್ನರ್ಸ್‌ ಮೈಂಡ್‌ಸೆಟ್‌’ ಪುಸ್ತಕ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ದಿ ವಿನ್ನರ್ಸ್‌ ಮೈಂಡ್‌ಸೆಟ್‌ ಎನ್ನುವ ಪುಸ್ತಕ ಬರೆದು, ಬೆಂಗಳೂರಲ್ಲಿ ಲೋಕಾರ್ಪಣೆಗೊಳಿಸಿದ ಆಸ್ಟ್ರೇಲಿಯಾದ ತಾರಾ ಕ್ರಿಕೆಟಿಗ ಶೇನ್‌ ವಾಟ್ಸನ್‌. ಬೆಂಗಳೂರಲ್ಲಿರುವ ಪ್ರೆಸಿಡೆನ್ಸಿ ವಿವಿಯಲ್ಲಿ ಪುಸ್ತಕ ಲೋಕಾರ್ಪಣೆ. ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ, ಆರ್‌ಸಿಬಿಗೆ ಗುಡ್‌ ಲಕ್‌ ಹೇಳಿದ ವಾಟ್ಸನ್‌.

 ಬೆಂಗಳೂರು :  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್‌ ವಾಟ್ಸನ್‌ ತಮ್ಮ ‘ದಿ ವಿನ್ನರ್ಸ್‌ ಮೈಂಡ್‌ಸೆಟ್‌’ ಪುಸ್ತಕವನ್ನು ಸೋಮವಾರ ನಗರದ ಪ್ರೆಸಿಡೆನ್ಸಿ ವಿಶ್ವ ವಿದ್ಯಾಲಯದಲ್ಲಿ ಬಿಡುಗಡೆ ಮಾಡಿದರು. ವಿವಿಯ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ಪಾಲ್ಗೊಂಡ ವಾಟ್ಸನ್‌, ಗೆಲುವಿಗೆ ಅಗತ್ಯವಿರುವ ಸೂತ್ರಗಳ ಕುರಿತು ಮಾಹಿತಿ ಹಂಚಿಕೊಂಡರು. ವಿದ್ಯಾರ್ಥಿಗಳ ಪ್ರಶ್ನೆಗೆ ವಿವರವಾಗಿ ಉತ್ತರಿಸಿದ ವಾಟ್ಸನ್‌, ಯಶಸ್ಸನ್ನು ಬೆನ್ನತ್ತಿ ಹೋಗುವುದು ಹೇಗೆ ಎನ್ನುವುದನ್ನು ತಿಳಿಸಿದರು.

ಪುಸ್ತಕ ಬಿಡುಗಡೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ವಾಟ್ಸನ್‌, ‘ವಿದ್ಯಾರ್ಥಿಗಳ ನಡುವೆ ತಮ್ಮ ಪುಸ್ತಕ ಬಿಡುಗಡೆ ಮಾಡಿದ್ದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದರು. ಐಪಿಎಲ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ವಾಟ್ಸನ್‌, ‘ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಿರುವುದು ಖುಷಿ ಕೊಟ್ಟಿದೆ. 

ತಂಡ ಈ ಬಾರಿ ಚಾಂಪಿಯನ್‌ ಆದರೂ ಅಚ್ಚರಿಯಿಲ್ಲ’ ಎಂದರು.ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಶೇನ್‌ ವಾಟ್ಸನ್‌ ಜೊತೆ ವಿವಿಯ ಕುಲಪತಿ ಡಾ. ನಿಸ್ಸಾರ್‌ ಅಹ್ಮದ್‌, ಉಪಕುಲಪತಿ ಡಾ.ಅನುಭಾ ಸಿಂಗ್‌, ರಿಜಿಸ್ಟಾರ್‌ ಡಾ.ಸಮೀನಾ ನೂರ್‌ ಅಹ್ಮದ್‌, ಹಾರ್ಪರ್‌ ಕಾಲಿನ್ಸ್‌ ಸಂಸ್ಥೆಯ ಸಹಾಯಕ ಪ್ರಕಾಶಕ ಸಚಿನ್‌ ಶರ್ಮಾ, ವಿವಿಯ ಕಾರ್ಪೋರೇಟ್‌ ಸಂವಹನ ಮುಖ್ಯಸ್ಥೆ ಅದಿತಿ ಅವಸ್ಥಿ ಇದ್ದರು.