ರಾಜಸ್ಥಾನ ವಿರುದ್ಧ ಗೆದ್ದರಷ್ಟೆ ಚೆನ್ನೈಗೆ ಉಳಿಗಾಲ: ಸೋತರೆ ಆರ್‌ಸಿಬಿಗೆ ಲಾಭ

| Published : May 12 2024, 01:16 AM IST / Updated: May 12 2024, 04:29 AM IST

ರಾಜಸ್ಥಾನ ವಿರುದ್ಧ ಗೆದ್ದರಷ್ಟೆ ಚೆನ್ನೈಗೆ ಉಳಿಗಾಲ: ಸೋತರೆ ಆರ್‌ಸಿಬಿಗೆ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಚೆಪಾಕ್‌ ಕ್ರೀಡಾಂಗಣದಲ್ಲಿ ಚೆನ್ನೈ vs ರಾಜಸ್ಥಾನ ಮೆಗಾ ಫೈಟ್‌. ಆರ್‌ಸಿಬಿ ಪಾಲಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಚೆನ್ನೈ ಸೋಲಿಗೆ ಆರ್‌ಸಿಬಿ ಕಾತರಿಸುತ್ತಿದೆ.

ಚೆನ್ನೈ: 17ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ಗೇರಲು ಹರಸಾಹಸ ಪಡುತ್ತಿರುವ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಭಾನುವಾರ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಸವಾಲು ಎದುರಾಗಲಿದೆ.ಇತ್ತಂಡಗಳಿಗೂ ಈ ಪಂದ್ಯ ಮಹತ್ವದ್ದೆನಿಸಿದ್ದು, ಚೆಪಾಕ್‌ ಕ್ರೀಡಾಂಗಣದಲ್ಲಿ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಅತ್ತ ಆರ್‌ಸಿಬಿ ಪಾಲಿಗೂ ಈ ಪಂದ್ಯ ನಿರ್ಣಾಯಕವಾಗಿದ್ದು, ಚೆನ್ನೈ ಸೋಲಿಗೆ ಆರ್‌ಸಿಬಿ ಕಾತರಿಸುತ್ತಿದೆ.ಚೆನ್ನೈ ಈ ಬಾರಿ 12 ಪಂದ್ಯಗಳನ್ನಾಡಿದ್ದು, ತಲಾ 6 ಗೆಲುವು, ಸೋಲು ಕಂಡಿದೆ. ಅಸ್ಥಿರ ಆಟ, ವೇಗದ ಬೌಲರ್‌ಗಳ ಅಲಭ್ಯತೆಯಿಂದ ತಂಡ ಸಂಕಷ್ಟದಲ್ಲಿದ್ದು, ಪ್ಲೇ-ಆಫ್‌ಗೇರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ ತಂಡದ ಪ್ಲೇ-ಆಫ್‌ ಹಾದಿ ಮತ್ತಷ್ಟು ಕಠಿಣಗೊಳ್ಳಲಿದೆ. ಆದರೆ ಇದರಿಂದ ಆರ್‌ಸಿಬಿಗೆ ಲಾಭವಾಗಲಿದೆ. ಕೊನೆ ಪಂದ್ಯದಲ್ಲಿ ಆರ್‌ಸಿಬಿಗೆ ಚೆನ್ನೈ ಎದುರಾಗಲಿದೆ.ಮತ್ತೊಂದೆಡೆ ರಾಜಸ್ಥಾನ 11ರಲ್ಲ 8 ಪಂದ್ಯ ಗೆದ್ದಿದ್ದು, ಮತ್ತೊಂದು ಗೆಲುವು ತಂಡವನ್ನು ಅಧಿಕೃತವಾಗಿ ಪ್ಲೇ-ಆಫ್‌ಗೇರಿಸಲಿದೆ. ಸೋತರೆ ನಾಕೌಟ್‌ ಸ್ಥಾನ ಅಧಿಕೃತಗೊಳ್ಳಲು ಮತ್ತಷ್ಟು ಸಮಯ ಕಾಯಬೇಕಿದೆ.

ಒಟ್ಟು ಮುಖಾಮುಖಿ: 28

ಚೆನ್ನೈ: 15ರಾಜಸ್ಥಾನ: 13

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋತುರಾಜ್‌(ನಾಯಕ), ರಚಿನ್‌, ಡ್ಯಾರಿಲ್‌, ದುಬೆ, ಮೊಯೀನ್‌, ಜಡೇಜಾ, ಧೋನಿ, ಸ್ಯಾಂಟ್ನರ್‌, ಶಾರ್ದೂಲ್‌, ತುಷಾರ್‌, ಸಿಮರ್‌ಜೀತ್‌.ರಾಜಸ್ಥಾನ: ಜೈಸ್ವಾಲ್‌, ಸಂಜು(ನಾಯಕ), ರಿಯಾನ್‌, ಹೆಟ್ಮೇಯರ್‌, ಪೊವೆಲ್‌, ಶುಭಂ, ಅಶ್ವಿನ್‌, ಬೌಲ್ಟ್‌, ಆವೇಶ್‌, ಸಂದೀಪ್‌, ಚಹಲ್‌.

ಪಂದ್ಯ: ಮಧ್ಯಾಹ್ನ 3.30ಕ್ಕೆ