ಸಾರಾಂಶ
ನವದೆಹಲಿ: ಆಸ್ಟ್ರೇಲಿಯಾ ಕ್ರಿಕೆಟ್‌ಗೆ ವಿದಾಯ ಹೇಳಿ, ಪೂರ್ಣ ಪ್ರಮಾಣದಲ್ಲಿ ಟಿ20 ಲೀಗ್‌ನಲ್ಲಿ ಆಡಲು ಐಪಿಎಲ್ ತಂಡವೊಂದು ಮುಂದಿಟ್ಟಿದ್ದ ₹58 ಕೋಟಿ ಡೀಲ್‌ಅನ್ನು ಪ್ಯಾಟ್ ಕಮಿನ್ಸ್ ಹಾಗೂ ಟ್ರ್ಯಾವಿಸ್ ಹೆಡ್ ತಿರಸ್ಕರಿಸಿದ್ದಾರೆ ಎಂದು ಆಸ್ಟ್ರೇಲಿಯಾದ ಪ್ರತಿಷ್ಠಿತ ಮಾಧ್ಯಮವೊಂದರಲ್ಲಿ ವರದಿಯಾಗಿದೆ.ವರದಿಗಳ ಪ್ರಕಾರ, ಐಪಿಎಲ್ ತಂಡವೊಂದು ಕಮಿನ್ಸ್ ಹಾಗೂ ಹೆಡ್‌ರನ್ನು ಸಂಪರ್ಕಿಸಿದ್ದು, ಐಪಿಎಲ್ ಸೇರಿ ವಿಶ್ವದ ಹಲವು ದೇಶಗಳಲ್ಲಿ ನಡೆಯುವ ಟಿ20 ಟೂರ್ನಿಗಳಲ್ಲಿ ತಮ್ಮ ತಂಡದ ಪರ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ವಾರ್ಷಿಕ 10 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ ಆಫರ್ ಮುಂದಿಟ್ಟಿದೆ. ಆದರೆ ಹೆಡ್, ಕಮಿನ್ಸ್ ಇದನ್ನು ತಿರಸ್ಕರಿಸಿದ್ದು, ತಾವು ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಸನ್‌ರೈಸರ್ಸ್ ತಂಡದಿಂದ ಕಮಿನ್ಸ್ ₹18 ಕೋಟಿ, ಹೆಡ್ ₹14 ಕೋಟಿ ಪಡೆಯುತ್ತಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟ್ ವಾರ್ಷಿಕ ಆದಾಯದ ರೂಪದಲ್ಲಿ ನಾಯಕ ಕಮಿನ್ಸ್ ₹17.48 ಕೋಟಿ, ಹೆಡ್ ₹8.7 ಕೋಟಿ ಗಳಿಸುತ್ತಿದ್ದಾರೆ.