ವಿಶ್ವ ಪ್ಯಾರಾ ಅಥ್ಲಟಿಕ್ಸ್‌: ಭಾರತದ ದೀಪ್ತಿ ವಿಶ್ವ ದಾಖಲೆ!

| Published : May 21 2024, 12:31 AM IST / Updated: May 21 2024, 04:29 AM IST

ಸಾರಾಂಶ

ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತದ ದೀಪ್ತಿ ಜೀವನ್‌ಜಿ ವಿಶ್ವ ದಾಖಲೆ. ಬುದ್ಧಿಶಕ್ತಿ ದೌರ್ಬಲ್ಯವಿರುವ ಅಥ್ಲೀಟ್‌ಗಳು ಸ್ಪರ್ಧಿಸುವ ಟಿ20 ವಿಭಾಗದ 400 ಮೀ. ಓಟದಲ್ಲಿ ದೀಪ್ತಿಗೆ ಚಿನ್ನದ ಪದಕ. ಈ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ.

ಕೊಬೆ(ಜಪಾನ್‌): ಭಾರತದ ದೀಪ್ತಿ ಜೀವನ್‌ಜಿ ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ ಕೂಟದ ಮಹಿಳೆಯರ 400 ಮೀ. ಟಿ20 ವಿಭಾಗದ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. 

55.07 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ದೀಪ್ತಿ, ಕಳೆದ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅಮೆರಿಕದ ಬ್ರಿಯಾನಾ ಕ್ಲಾರ್ಕ್‌ ನಿರ್ಮಿಸಿದ್ದ ದಾಖಲೆ (55.12 ಸೆಕೆಂಡ್‌)ಯನ್ನು ಮುರಿದರು. ಟರ್ಕಿಯ ಐಸೆಲ್‌ ಒನ್ಡೆರ್‌ (55.19 ಸೆ.) ಹಾಗೂ ಈಕ್ವೆಡಾರ್‌ನ ಲಿಜಾನ್ಶೆಲಾ (56.68) ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಪಡೆದರು. 

ಬುದ್ಧಿಶಕ್ತಿಯ ದೌರ್ಬಲ್ಯವಿರುವ ಅಥ್ಲೀಟ್‌ಗಳು ಟಿ20 ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.ಇನ್ನು ಸೋಮವಾರ ಭಾರತಕ್ಕೆ ಮತ್ತೆರಡು ಪದಕಗಳು ದೊರೆತವು. ಪುರಷರ ಎಫ್‌ 56 ವಿಭಾಗದ ಡಿಸ್ಕಸ್‌ ಥ್ರೋನಲ್ಲಿ ಯೋಗೇಶ್‌ ಕಥೂನಿಯಾ, ಮಹಿಳೆಯರ ಎಫ್‌ 34 ವಿಭಾಗದ ಶಾಟ್‌ಪುಟ್‌ನಲ್ಲಿ ಭಾಗ್ಯಶ್ರೀ ಜಾಧವ್‌ ಬೆಳ್ಳಿ ಜಯಿಸಿದರು. ಕೂಟದಲ್ಲಿ ಈವರೆಗೂ ಭಾರತ ಒಟ್ಟು 5 ಪದಕ ಪಡೆದಿದೆ.